ವಚನ: ನೀರ ಕಂಡಲ್ಲಿ ಮುಳುಗುವರಯ್ಯಾ

– .

ಬಸವಣ್ಣ,, Basavanna

“ನೀರ ಕಂಡಲ್ಲಿ ಮುಳುಗುವರಯ್ಯಾ
ಮರನ ಕಂಡಲ್ಲಿ ಸುತ್ತುವರಯ್ಯಾ
ಬತ್ತುವ ಜಲವ
ಒಣಗುವ ಮರನ
ಮಚ್ಚಿದವರು
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವ

ಕಣ್ಣಿಗೆ ಕಾಣದ ಕೂಡಲಸಂಗಮದೇವನ ಇರುವಿಕೆಯ ಅನುಬವ ಪಡೆದುಕೊಳ್ಳಲು ಬಕ್ತಿಬಾವದಿಂದೊಡಗೂಡಿದ ಸೂಕ್ಶ್ಮ ಸಂವೇದಿ ಮನಸ್ಸು ಬೇಕು. ಅಂತಹ ಸೂಕ್ಶ್ಮ ಸಂವೇದಿ ಮನವಿಲ್ಲದೆ ಪೂಜಿಸುವ ಬಕ್ತರು ಕೂಡಲಸಂಗಮದೇವನ ಅರಿಯುವುದಾದರು ಎಂತು? ನೀರು ಕಂಡಲ್ಲಿ ಮುಳುಗೇಳುವ ಜನ, ಮರವನ್ನು ಕಂಡಕೂಡಲೆ ಕಣ್ಣು ಮುಚ್ಚಿ ಬಯ ಬಕ್ತಿಯಿಂದ ಸುತ್ತುವ ಜನ, ನೀರು ಬತ್ತಿ ಮಾಯವಾಗುವದನ್ನರಿಯರೇ? ಮರ ಒಣಗಿ ನೆಲಕ್ಕುರುಳುವುದು ತಿಳಿದಿಲ್ಲವೇ? ಇಂತಹ ಸ್ತಿರ ಬಕ್ತಿಯಿಲ್ಲದ, ನೀರು ಮರಗಳ ನೆಚ್ಚಿ ಡಾಂಬಿಕ ಬಕ್ತಿ ತೋರಿಸುವ ಜನರು ಸೂಕ್ಶ್ಮ ಗ್ರಹಿಕೆಯ ನಿನ್ನನೆಂತು ಅರಿತುಕೊಳ್ಳುತ್ತಾರೆ? ಎಂಬ ತಾತ್ಪರ‍್ಯವೂ ಬಸವಣ್ಣನವರ ಈ ವಚನದಲ್ಲಿ ವ್ಯಕ್ತವಾಗಿದೆ. ಸುಳ್ಳಿನ ಬೆನ್ನೇರಿ ಹೋಗಿ ಸತ್ಯವ ಪಡೆಯಲು ಹೆಣಗುತ್ತಾರೆ. ಸುಳ್ಳೆಂಬ ಮರೀಚಿಕೆಯಿಂದಾಗಿ ನಿಜವನ್ನು ನೋಡಲು ಸಾದ್ಯವಾಗುತ್ತಿಲ್ಲ ಎಂಬುದು ಈ ವಚನದ ಸಾರವಾಗಿದೆ.

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *