ಮಾಡಿನೋಡಿ ಮೊಟ್ಟೆ ಪ್ರೈಡ್ ರೈಸ್

– ನಿತಿನ್ ಗೌಡ.

ಏನೇನು ಬೇಕು ?

  • ಮೊಟ್ಟೆ – 4 ರಿಂದ 5 ( ಇಬ್ಬರಿಗೆ )
  • ಬಾಸುಮತಿ ಅಕ್ಕಿ – 1 ಲೋಟ ( ಇಬ್ಬರಿಗೆ )
  • ಶುಂಟಿ – 1.5 ಇಂಚು
  • ಬೆಳ್ಳುಳ್ಳಿ – 10 ಎಸಳು
  • ಹಸಿಮೆಣಸು – 4 ರಿಂದ 5
  • ಕಾಳುಮೆಣಸು ಪುಡಿ – ಅರ್‍ದ ಚಮಚ
  • ಎಲೆಕೋಸು – ಸ್ವಲ್ಪ
  • ಡೊಣ್ ಮೆಣಸು (ಕ್ಯಾಪ್ಸಿಕಮ್) – ಅರ್‍ದ
  • ಕ್ಯಾರೇಟ್ – 1
  • ಎಣ್ಣೆ – ಸ್ವಲ್ಪ
  • ಉಪ್ಪು – ಸ್ವಲ್ಪ
  • ಸೋಯಾ ಸಾಸು – ಕಾಲು ಕಪ್ಪು
  • ನಿಂಬೆ – ಅಲಂಕಾರಕ್ಕೆ
  • ಈರುಳ್ಳು – 1

ಮಾಡುವ ಬಗೆ

ಮೊದಲಿಗೆ ಅಕ್ಕಿಯನ್ನ್ಯು( ಬಾಸುಮತಿ ಆದರೆ ಚೆನ್ನ) ತೊಳೆದು, ಅನ್ನ ಮಾಡಿ ಹರಡಿ ಇಡಿ. ಆಮೇಲೆ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಅದಕ್ಕೆ ಎಲ್ಲಾ ಮೊಟ್ಟೆಗಳನ್ನು ಒಡೆದುಹಾಕಿ, ಅದಕ್ಕೆ ಕಾಲು ಚಮಚ ಕಾಳುಮೆಣಸಿನ ಪುಡಿ ಹಾಕಿ ಹುರಿದು ಎತ್ತಿಟ್ಟುಕೊಳ್ಳಿರಿ. ಈಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಶುಂಟಿ, ಬೆಳ್ಳುಳ್ಳಿ ಮತ್ತು ನಡುಗಾತ್ರದಿ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ 2 ನಿಮಿಶ ಹುರಿಯಿರಿ. ಈಗ ಇದಕ್ಕೆ ಹೆಚ್ಚಿಟ್ಟುಕೊಂಡ ಕ್ಯಾರೇಟು, ಎಲೆಕೋಸು ಮತ್ತು ಡೊಣ್ಣಮೆಣಸು ಹಾಕಿ ಸ್ವಲ್ಪ ಹುರಿಯಿರಿ. ಇಲ್ಲಿ ತರಕಾರಿಗಳನ್ನು ಹೆಚ್ಚು ಹುರಿಯಬಾರದು ಕಾರಣ, ನಾವು ತಿನ್ನುವಾಗ ಅವು ನಮ್ಮ ಬಾಯಿಗೆ ಗರಿಗರಿಯಾಗಿ ಸಿಕ್ಕರೆ ಚೆನ್ನಾಗಿರುತ್ತದೆ. ಈಗ ಇದಕ್ಕೆ ಸ್ವಲ್ಪ ಉಪ್ಪು ಅನ್ನ ಹಾಕಿಕೊಳ್ಳಿರಿ. ಇದಕ್ಕೆ ಹುರಿದಿಟ್ಟುಕೊಂಡ ಮೊಟ್ಟೆ, ಸೋಯಾ ಸಾಸ್ ಹಾಕಿ ದೊಡ್ಡನೆ ಬೆಂಕಿಯಲ್ಲಿ ಹುರಿಯಿರಿ. ದೊಡ್ಡನೆ ಬೆಂಕಿಯಲ್ಲಿ ಅನ್ನವನ್ನು ಹುರಿಯುವುದು ಒಳ್ಳೆಯದು. ಕಬ್ಬಿಣದ ಬಾಣಲೆಯಲ್ಲಿ ಹುರಿದರೆ ಇನ್ನೂ ಒಳ್ಳೆಯದು. ಬಾಣಲೆಯನ್ನು ಅಲ್ಲಾಡಿಸುತ್ತಾ, ಅನ್ನವನ್ನು ತಿರುಗಿಸಿ , ಬೇಕಾದಲ್ಲಿ ಕಾಳುಮೆಣಸಿನ ಪುಡಿ ಹಾಕಿ ಇನ್ನಶ್ಟು ಹುರಿದು ಒಲೆ ಆರಿಸಿ. ಅಲಂಕಾರಕ್ಕೆ ನಿಂಬೆ ಹಣ್ಣು, ಈರುಳ್ಳಿ ಹೆಚ್ಚಿಟ್ಟುಕೊಳ್ಳಬಹುದು. ಇದನ್ನು ಟೊಮೋಟೋ ಸಾಸ್ ಮತ್ತು ಮೆಣಸಿನ ಸಾಸ್ ಜೊತೆ ಸವಿಯಬಹುದು.

(ಚಿತ್ರಸೆಲೆ: ಬರಹಗಾರರು )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: