ಕವಿತೆ: ನಗು
– ವೆಂಕಟೇಶ ಚಾಗಿ.
ನಗುವಿನ ಹೊನ್ನು ಯಾರಲ್ಲಿಹುದೋ
ಸಿರಿವಂತರು ಅವರೇ ಎಂದೆಂದೂ
ನಗುತಲಿ ಇದ್ದರೆ ಜಗವು ಸುಂದರ
ನೋವಿನ ಬಾದೆ ಬಾರದು ಎಂದಿಗೂ
ಮನದಲಿ ನಗುವಿನ ಸೆಲೆಯೊಂದಿರಲು
ಜಗವೇ ದೇವರ ಮಂದಿರವು
ದೇವರು ಇರದ ಸ್ವರ‍್ಗ ಯಾವುದು
ನಗುತಲಿ ಇರುವುದೇ ಸುಂದರವು
ಕಶ್ಟಗಳೆಶ್ಟೇ ಬಂದರೆ ಬರಲಿ
ಇಶ್ಟದ ಜೀವನ ನಮದೆಂದೂ
ಬದುಕಿದು ನಮಗೆ ಬಾಗ್ಯವು ಎಂದು
ನಗುತಿರೆ ನೆಮ್ಮದಿ ಎಂದೆಂದೂ
ಬದುಕಲಿ ಇದ್ದರೆ ನಗುವಿನ ಬುತ್ತಿ
ನಮ್ಮಯ ಬದುಕು ಹಸನೆಂದೂ
ಹಸಿವಿಗೆ ಕಸುವಿಗೆ ನಗುವೇ ಶಕ್ತಿ
ಸಂತೆಯ ಚಿಂತೆ ನಮಗೇಕಿಂದು
ಮುಂದಿನ ದಿನಗಳು ಯಾರಿಗೆ ಗೊತ್ತು
ಸಮಯವೇ ನಮಗೆ ಇರುವ ಸ್ವತ್ತು
ಶಿಸ್ತಿನ ಬದುಕಲಿ ನಡೆಯುತಲಿದ್ದರೆ
ಬದುಕಲಿ ಬರದು ಎಂದಿಗೂ ಆಪತ್ತು
(ಚಿತ್ರ ಸೆಲೆ: kalw.org)
ಇತ್ತೀಚಿನ ಅನಿಸಿಕೆಗಳು