ಮಾಡಿ ಸವಿಯಿರಿ ಕಾರ ಕೋಳಿ ಗೊಜ್ಜು
ಏನೇನು ಬೇಕು
- ಕತ್ತರಿಸಿದ ಕೋಳಿ (ಸ್ಕಿನ್ ಔಟ್) – ½ ಕಿಲೋ
- ಈರುಳ್ಳಿ – 1
- ಆಪಲ್ ಟೊಮೆಟೊ – 3
- ಅರಿಶಿಣದ ಪುಡಿ – ಸ್ವಲ್ಪ
- ತೆಂಗಿನಕಾಯಿ – 1 ಚೂರು
- ಬೆಳ್ಳುಳ್ಳಿ – 3 ಎಸಳು
- ಚಕ್ಕೆ – ಸಣ್ಣ ಚೂರು
- ಶುಂಟಿ – ಸಣ್ಣ ಚೂರು
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಲವಂಗ – 1
- ಏಲಕ್ಕಿ – 1
- ಗರಂ ಮಸಾಲ – ¼ ಚಮಚ
- ಒಣ ಮೆಣಸಿನಕಾಯಿ ಪುಡಿ – 3 ಚಮಚ
ಮಾಡುವ ಬಗೆ
ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಕಾದ ಎಣ್ಣೆಗೆ ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಕತ್ತರಿಸಿದ ಟೊಮೆಟೊ, ಸ್ವಲ್ಪ ಉಪ್ಪು ಹಾಗೂ ಅರಿಶಿಣದ ಪುಡಿ ಸೇರಿಸಿ ಹುರಿದು, ಆಮೇಲೆ ಕತ್ತರಿಸಿದ ಕೋಳಿ ಸೇರಿಸಿ ಚೆನ್ನಾಗಿ ಹುರಿಯಿರಿ.
ಒಂದು ಸಣ್ಣ ಜಾರ್ ಗೆ ತೆಂಗಿನಕಾಯಿ, ಬೆಳ್ಳುಳ್ಳಿ, ಶುಂಟಿ, ಕೊತ್ತಂಬರಿ ಸೊಪ್ಪು, ಚಕ್ಕೆ, ಲವಂಗ, ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡಿದ್ದ ಮಸಾಲೆಯನ್ನು ಒಂದು ಸಣ್ಣ ಜಾಲರಿಗೆ ಹಾಕಿ (ಕಾಪಿ ಸೋಸುವ ಜಾಲರಿಯಂತದ್ದು) ಸೋಸಿಕೊಂಡು, ಆ ರಸವನ್ನು ಬಾಣಲೆಗೆ ಹಾಕಿ, ಹುರಿದ ಚಿಕನ್ ಜೊತೆ ಚೆನ್ನಾಗಿ ಕಲಸಿ, ರುಚಿಗೆ ತಕ್ಕಶ್ಟು ಉಪ್ಪು ಹಾಗೂ ಒಣ ಮೆಣಸಿನಕಾಯಿ ಪುಡಿ ಹಾಕಿ ಬೇಯಿಸಿ. ಈಗ ರುಚಿಯಾದ ಕಾರ ಕೋಳಿ ಗೊಜ್ಜು ಸವಿಯಲು ಸಿದ್ದ. ಹೊಟೇಲ್ ರೀತಿಯ ಚಿಕನ್ ಕರಿ ಕೇಳುವವರಿಗೆ ಇದು ಹೆಚ್ಚು ಹಿಡಿಸುವುದು.
ಇತ್ತೀಚಿನ ಅನಿಸಿಕೆಗಳು