ಕವಿತೆ: ಆಕ್ರಮಣ
ಹಸಿರ ಮುಸಕು ತಲೆಗೆ ಹೊದ್ದು
ಬೆಳ್ಳಿ ಜರಿಯ ಸೀರೆಯುಟ್ಟು
ಹಣೆಯ ಸಿಂಗಾರಕೆ ತಿಲಕವಿಟ್ಟು
ಮೈ ನಡುಗಿಸಿ ಚುಮು ಚುಮು ಬೆಳಗಿನಲಿ
ತೆರೆದುಕೊಳುವ ಶಿಶಿರ ದಿನದ ಶ್ವೇತ
ವೈಬವಕೆ ಸಾಟಿ ಯಾರು?
ಇದ್ದು ಹೋಗುವಶ್ಟು ದಿನ
ಮೈ ಕುಲುಕಿ ತುಟಿ ಅದುರಿಸಿ
ಮುದುಡಿಸಿ ಮಲಗಿಸುವ ನಗ್ನ ಶ್ವೇತ ಬಗ್ನಗೊಳಿಸುವಳು
ಮುಂಜಾವಿನ ಸವಿಗನಸನು ಮುಸುಕಿನಲಿ!
ಶಿಶಿರ ಸಮರಕಂಜಿ ನಡುಗಿದಾಂಗೆ,
ಮನೆಯ ಮುಂದೆ ಅಗ್ನಿ ದಂಗೆ
ಕೆನ್ನಾಲಿಗೆಯಲಿ ಕೈ ಮೈ ಹದಗೊಳಿಸಿ,
ಸನ್ನದ್ದರಾಗುವೆವು ಶ್ವೇತ ಶೀತಲ ಸಮರಕೆ
ಎದೆಯೊಡ್ಡಿ! ಕಾದು ಬಗ್ಗು ಬಡಿಯುವೆವು
ಶಿಶಿರನ ಅತೀರೇಕದ ಆಕ್ರಮಣಕೆ!
(ಚಿತ್ರ ಸೆಲೆ: stuartwilde.com )
ಇತ್ತೀಚಿನ ಅನಿಸಿಕೆಗಳು