ಕವಿತೆ: ಶಿವ
ಶಿವನ ಮನದೊಳಗಿನ
ಬಾವನೆಗಳೆಲ್ಲ ಬತ್ತಿಹೋಗಿ
ಕಾವ್ಯ ಕುಸುಮಗಳು ಬಾಡಿವೆ
ಶಿವನ ಮಸ್ತಕದೊಳಗಿನ
ಪದಪುಂಜಗಳು ಕ್ರುಶವಾಗಿ
ಹದವರಿತ ಕವಿತೆಗಳು ನಲುಗಿವೆ
ಶಿವನ ಅನುಬವದೊಳಗಿನ
ಜೀವನಾಮ್ರುತಗಳು ಬೆಂಡಾಗಿ
ತತ್ತ್ವ ವಚನಗಳು ಕಾಣದಾಗಿವೆ
ಶಿವನ ಬದುಕಿನೊಳಗಿನ
ಅನುಬವ ಪಾಟಗಳು ನೀರಸವಾಗಿ
ಕತೆ ಲೇಕನಗಳು ಕಣ್ಮರೆಯಾಗಿವೆ
ಶಿವನ ಕವಿಸಮಯದೊಳಗಿನ
ಕಲ್ಪನಾ ಲಹರಿಗಳು ಮರೀಚಿಕೆಯಾಗಿ
ಬರಹಗಳು ಚಿರನಿದ್ರೆಗೆ ಜಾರಿವೆ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು