ಕವಿತೆ: ಬವಣೆ
ಬವಣೆ ಇದು ಬರುವುದು
ನಿನ್ನ ಉಸಿರಿರೋವರೆಗೂ
ಯೋಚಿಸದೆ ನಡೆ ಮುಂದೆ
ಅದನು ಬಿಟ್ಟು ನಿನ್ನ ಹಿಂದೆ
ಇದಕೆ ಯಾರೂ ಹೊರತಲ್ಲ
ಯಾರಿಗೂ ಇದು ಹೊಸತಲ್ಲ
ಈ ದಾರಿಯಲಿ ನಡೆದವರೆಶ್ಟೋ
ಅಲ್ಲೇ ನಿಂತು ಅಳುತಿಹರೆಶ್ಟೋ
ನೋಡಿ ನೋಡಿ ಹೆದರದಿರು
ದಿನವೂ ನಲುಗಿ ಕುಗ್ಗದಿರು
ಮರೆಯಾಗುವ ಮೋಡವಿದು
ಮೆಟ್ಟಿ ನಿಂತು ಹಿಗ್ಗುತಿರು
ಕಾಯುತಿರುವೆ ಏಕೆ ನೀನು
ಯಾರೋ ಬಂದು ಸರಿಪಡಿಸರು ಇದನು
ಆಡು ಇದು ನಿನ್ನ ಆಟ
ಇದುವೇ ಬದುಕಿಗೊಂದು ಪಾಟ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು