ಮಾಡಿ ನೋಡಿ ಶಾವಿಗೆ ಉಪ್ಪಿಟ್ಟು
– ನಿತಿನ್ ಗೌಡ.
ಏನೇನು ಬೇಕು ?
- ಶಾವಿಗೆ – 5 ಕಪ್ಪು
- ನೀರು – 3 ಕಪ್ಪು
- ಉದ್ದಿನ ಬೇಳೆ – ಅರ್‍ದ ಚಮಚ
- ಅರಿಶಿಣ ಪುಡಿ – ಸ್ವಲ್ಪ
- ಉಪ್ಪು – ಚಿಟಿಗೆ
- ಈರುಳ್ಳಿ – 1
- ಹಸಿರು ಮೆಣಸಿನಕಾಯಿ – 2
- ಕರಿ ಬೇವಿನೆಲೆ – ಸ್ವಲ್ಪ
- ಟೊಮೋಟೊ – 1
- ಸಣ್ಣಗೆ ಹೆಚ್ಚಿದ ಶುಂಟಿ – 1 ಚಮಚ
- ಅಡುಗೆ ಎಣ್ಣೆ – 8 ಚಮಚ
- ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ – 2
- ತೆಂಗಿನ ತುರಿ – ಅರ್‍ದ ಕಪ್ಪು
- ಸಾಸಿವೆ – ಅರ್‍ದ ಚಮಚ
ಮಾಡುವ ಬಗೆ
ಮೊದಲಿಗೆ ಟೊಮೋಟೊ, ಈರುಳ್ಳಿ, ಶುಂಟಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟುಕೊಳ್ಳಿರಿ. ಆಮೇಲೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಅದಕ್ಕೆ ಶಾವಿಗೆ ಹಾಕಿ, ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿದು ಎತ್ತಿಟ್ಟುಕೊಳ್ಳಿರಿ. ಜೊತೆಗೆ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದ ಮೇಲೆ ಸಾಸಿವೆ ಮತ್ತು ಉದ್ದಿನ ಬೇಳೆ ಹಾಕಿ. ಸಾಸಿವೆ ಸಿಡಿದೊಡನೆ ಕತ್ತರಿಸಿದ ಶುಂಟಿ, ಈರುಳ್ಳಿ, ಕರಿಬೇವು ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಸವುಟು ಅಲ್ಲಾಡಿಸಿ. ಈರುಳ್ಳಿ ಚೂರು ಕರಗುತ್ತಿದ್ದಂತೆ ಟೊಮೋಟೊ ಹಾಕಿ. ಈಗ ಇದಕ್ಕೆ ಉಪ್ಪು ಮತ್ತು ಅರಶಿಣ ಪುಡಿ ಸೇರಿಸಿರಿ. ಈಗ ಟೊಮೋಟೊ ಮೆತ್ತಗಾಗುವವರೆಗೆ ಚೆನ್ನಾಗಿ ಹುರಿಯಿರಿ. ಈಗ ಅಳತೆಗೆ ತಕ್ಕಂತೆ ನೀರು ಹಾಕಿ ಕುದಿಸಿರಿ. ನೀರು ಕುದಿಯುತಿದ್ದಂತೆ, ಹುರಿದಿಟ್ಟ ಶಾವಿಗೆ ಹಾಕಿ, ಮುಚ್ಚಳ ಮುಚ್ಚಿ ಒಂದೆರಡು ನಿಮಿಶ ನಡು ಉರಿಯಲ್ಲಿ ಬೇಯಲು ಬಿಡಿ. ಈಗ ನೀರು ಮಳ್ಳುತ್ತಾ(ಆರುತ್ತಾ) ಬಂದಾಗ ಮುಚ್ಚಳ ತೆಗೆದು ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಸೇರಿಸಿ ಮುಚ್ಚಿಡಿ. ಮತ್ತೆ ಮುಚ್ಚಳ ಮುಚ್ಚಿ 2-3 ನಿಮಿಶಗಳ ಕಾಲ ಬೇಯಿಸಿ ಒಲೆ ಆರಿಸಿ. ಇದನ್ನು ಒಂದೆರಡು ನಿಮಿಶ ಹಾಗೆಯೇ ಆರಲು ಬಿಟ್ಟು ನಂತರ ಸೇವಿಸಿ.
( ಚಿತ್ರಸೆಲೆ: wikimedia.org )
ಇತ್ತೀಚಿನ ಅನಿಸಿಕೆಗಳು