ಕಿರುಗವಿತೆ
– ನಿತಿನ್ ಗೌಡ.
ನೆರಳು ಬೆಳಕು ಕಾಯುವ ಹಾಗೆ
ಕಣ್ಣನು ರೆಪ್ಪೆ ಕಾಯುವ ಹಾಗೆ
ಉಸಿರನು ಗುಂಡಿಗೆ ಕಾಯುವ ಹಾಗೆ
ಮಾತನು ನಾಲಿಗೆ ಕಾಯುವ ಹಾಗೆ
ಬಾವನೆಗಳ ಮನಸು ಕಾಯುವ ಹಾಗೆ
ವಿವೇಚನೆಯನು, ಯೋಚನೆಗಳು ಕಾಯುವ ಹಾಗೆ
ಕಶ್ಟವನು ದೈರ್‍ಯ ಎದುರಿಸುವ ಹಾಗೆ
ಸ್ರುಶ್ಟಿಯನು ಲಯವು ಕಾಯುವ ಹಾಗೆ
ಎಲ್ಲವೂ ಬೆಸೆದುಕೊಂಡಿವೆ, ಒಂದರೊಳು ಇನ್ನೊಂದು;
ಕಾಯು ನೀ ನಿನ್ನೊಳಗಿನ ದಿಟದ ಹಣತೆಯ ಸಾಕು ಆರದಂತೆ;
ತೋರುವುದು ಈ ದಿಟ ದೀವಿಗೆ, ನಿನ ಮುಕುತಿಯ ಹಾದಿಯ, ತನ್ನೊಡಲ ಬೆಳಕ ಚೆಲ್ಲುತ
(ಚಿತ್ರಸೆಲೆ: copilot.mocrosoft.com )
ಇತ್ತೀಚಿನ ಅನಿಸಿಕೆಗಳು