ಕವಿತೆ: ಮಹಾತ್ಮರು

– .

ಗುಡಿಯಲ್ಲಿರುವ ದೇವರು
ನಮ್ಮ ಕಾಯುವುದ ಮರೆತರು
ಗಡಿಯಲ್ಲಿರುವ ವೀರ ಯೋದರು
ನಮ್ಮ ಕಾಯುವುದ ಮರೆಯಲಾರು

ಅನ್ನದಾತ ರೈತರು, ಜ್ನಾನದಾತ ಶಿಕ್ಶಕರು
ದೇಶವ ಕಟ್ಟುವ ಶ್ರಮಿಕ ಕಾರ‍್ಮಿಕರು
ದೇಶ ಕಾಯೋ ಸೈನಿಕರು ಇವರಲ್ಲವೇ
ಬಾರತಾಂಬೆಯ ಚತುರ‍್ಬುಜ ಶಕ್ತಿಯು

ರಣಬೂಮಿಯ ರಣಹದ್ದುಗಳಂತಿರುವರು
ರಣಹೇಡಿಗಳ ಹೆಡೆಮುರಿಯನು ಕಟ್ಟುವರು
ಹಿಮಾಲಯದ ಚಳಿ, ಮರುಬೂಮಿ ಬಿಸಿಲಿಗೆ
ಕಡಲ ಅಲೆಗಳ ಲೆಕ್ಕಿಸದೆ ಹೋರಾಡುವ ವೀರರು

ಜನನಿ ಜನ್ಮಬೂಮಿ ಸ್ವರ‍್ಗವೆಂದು ಪೂಜಿಸುವವರು
ಜನ್ಮಬೂಮಿಗೆ ಜೀವವನ್ನೇ ತರ‍್ಪಣ ನೀಡುವವರು
ದೇಶವಾಸಿಗಳಿಗೆ ಕಶ್ಟಕಾಲದಲ್ಲಿನ ಆಪತ್ಬಾಂದವರು
ದೇಶ ಸೇವೆಯೇ ಈಶ ಸೇವೆಯೆನ್ನುವ ಮಹಾತ್ಮರು.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *