ಇದುವೆ ಪ್ರೀತಿಯೋ?

– ಸುರಬಿ ಲತಾ.

ಹೇಳದೇ ಕೇಳದೇ
ಎದೆಯ ಗೂಡಿಗೆ ಲಗ್ಗೆ ಇಟ್ಟೆ,
ಕಳ್ಳನಂತೆ ಕನಸುಗಳ ಕದ್ದೆ

ನಿರಾಯಾಸವಾಗಿ ನಿರ‍್ಬಯವಾಗಿ
ನಿದಿರೆಯ ಓಡಿಸಿದೆ
ನಿಲ್ಲದೇ ಕಣ್ಣ ಮುಂದೆ ಕನವರಿಕೆಯಾದೆ

ವಿನಯದಿಂದಲೇ ವಿರಹವ ಮೂಡಿಸಿ
ಮನವ ಸೆಳೆದು ಮೌನವಾದೆ
ಮುಗುಳು ನಗೆಯಲಿ ಸೆರೆಯಾದೆ

ನೀನು ಮುಂಗೋಪಿಯೂ ಅಲ್ಲ
ಮುಗ್ದನು ನೀನಲ್ಲ
ನಿನಗಿಂತ ನನ್ನ ಅರಿತವರಾರೂ ಇಲ್ಲ

ಇದುವೆ ಪ್ರೀತಿಯೋ? ನನಗರಿವಿಲ್ಲ
ಸರಿಯೋ ತಪ್ಪೊ ಒಂದೂ ಗೊತ್ತಿಲ್ಲ
ಉತ್ತರವ ಹೇಳುವರಾರು ದೇವನೇ ಬಲ್ಲ

(ಚಿತ್ರ ಸೆಲೆ: wallarthd.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: