ಕಿರುಗವಿತೆಗಳು

– ನಿತಿನ್ ಗೌಡ.

ಕಾದ ಹಾಗೆ

ಇಳೆಯು, ಮಳೆಯ ಬರುವಿಕೆಗೆ ಕಾದ ಹಾಗೆ
ಮಳೆಯು ಮೋಡ ಕಾದ ಹಾಗೆ
ಮೋಡ ನೀರಾವಿ ಕಾದ ಹಾಗೆ
ಆವಿ ಬಿಸಿಲ‌ ಕಾದ ಹಾಗೆ
ಇರುವುದು ಒಂದರ ಕೊಂಡಿ ಇನ್ನೊಂದರಲಿ
ಬೆಸೆದುಕೊಂಡು;
ಜಗದ ಲಯವು ಸಾಗುವ ಪರಿ, ಅದು ಹೀಗೆ ನೀ‌ ಕಾಣು.

******

ಸುಳಿವು‌ ನೀಡದೆ

ನನ್ನೊಲವ ದಾರಿಯಲಿ
ಸಿಕ್ಕ ಹೊಂಬೆಳಕು ನೀ
ಹೇಗೆ ತಲುಪಿದೆ ನೀ ಹೇಳು,
ಇದರೊಳಗೆ!
ಕೊಂಚವೂ ಸುಳಿವು ನೀಡದೆ;

******

ಹರಕೆ

ಹೊತ್ತಿರುವೆ ನಾ
ನಿನ್ನ ಜೊತೆಗೆ ಬಾಳಬೇಕೆಂಬ ಹರಕೆಯ;
ತೀರಿಸಲು ನೀ ಇದನು
ಹಸನಾಗುವುದು ನಮ್ಮ ಬಾಳ ಪಯಣವು

(ಚಿತ್ರಸೆಲೆ: copilot.mocrosoft.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *