ಕವಿತೆ:ಸೋಲು
– ವೆಂಕಟೇಶ ಚಾಗಿ.
ಒಂದು ಕಾರಣ ಬೇಕಿತ್ತು
ಸೋಲು ಒಪ್ಪಿಕೊಳ್ಳಲು
ಈಗ ಅದೇ ಆಗಿದೆ
ಅಪ್ಪಿ ಕೊಂಡಿದೆ
ಗೆಲುವಿನೊಂದಿಗೆ ಸೋಲು
ನಿಜವಾಗಿಯೂ ನಾನು
ಸೋತಿಲ್ಲ
ಇಣುಕಿದರೆ ಏನಂತೆ ತಪ್ಪು
ಏಕೆ ಬೇಕು, ಆ ಕಾರಣ
ನಗುವಿನ ಅಲೆ ದಡಕ್ಕೆ ಬಂದು
ಅಪ್ಪಿ ಕೊಂಡಿದೆ ಮನವನ್ನು
ಇದು ಗೆಲುವೇ ಸೋಲೇ
ನಿಜವಾಗಿಯೂ ನಾನು
ಸೋತಿಲ್ಲ
ತೀರದ ಬಯಕೆಗಳ ಸಾಲಲ್ಲಿ
ಏನೋ ಮಿಂಚುಗಳಿವೆ
ನಗುತ ನಗುತಲೇ
ಅಂತರಂಗವ ಸೇರವೆ
ನಗು ಗೆಲುವಾಯಿತೇ
ನಿಜವಾಗಿಯೂ ನಾನು
ಸೋತಿಲ್ಲ
ಬದುಕು ಬರಡಲ್ಲ
ಹುಟ್ಟುತ್ತವೆ ಬುಗ್ಗೆಗಳು
ಪ್ರತಿ ಕ್ಶಣವೂ ಹೊಸತು
ಈಗೇನಿಲ್ಲ ಹಳತು
ಮತ್ತೆ ಗೆಲುವಿದೆ
ನಿಜವಾಗಿಯೂ ನಾನು
ಸೋತಿಲ್ಲ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು