ಗೋದಿ ನುಚ್ಚಿನ ಉಪ್ಪಿಟ್ಟು
ಏನೇನು ಬೇಕು
- ಗೋದಿ ನುಚ್ಚು – 1 ಲೋಟ
- ಈರುಳ್ಳಿ – 2
- ಹಸಿಮೆಣಸಿನಕಾಯಿ – 3
- ತೆಂಗಿನಕಾಯಿ ತುರಿ – ಸ್ವಲ್ಪ (ತುರಿ ದಪ್ಪಗಿದ್ದರೆ ಚೆನ್ನ)
- ಕಡಲೆಬೇಳೆ – ಸ್ವಲ್ಪ
- ಕರಿಬೇವು – ಸ್ವಲ್ಪ
- ಸಾಸಿವೆ – ಸ್ವಲ್ಪ
ಮಾಡುವ ಬಗೆ
ಬಾಣಲೆಗೆ ಗೋದಿ ನುಚ್ಚನ್ನು ಹಾಕಿ, ಕೆಂಪಗಾಗುವವರೆಗೂ ಹುರಿದು, ತೆಗೆದಿಡಿ. ಒಂದು ಬಾಣಲೆಗೆ ಅಡುಗೆ ಎಣ್ಣೆ ಸೇರಿಸಿ, ಕಾದ ಎಣ್ಣೆಗೆ ಕತ್ತರಿಸಿದ ಈರುಳ್ಳಿ, ಸಾಸಿವೆ, ಹಸಿಮೆಣಸಿನಕಾಯಿ (ಗೋದಿ ಉಪ್ಪಿಟ್ಟು ಕಾರವಾಗಿದ್ದರೆ ಸವಿಯಲು ಚೆನ್ನಾಗಿರುತ್ತದೆ, ಬೇಕಿದ್ದರೆ ಒಂದೆರಡು ಹಸಿಮೆಣಸಿನಕಾಯಿಯನ್ನು ಹೆಚ್ಚಾಗಿ ಸೇರಿಸಬಹುದು), ಕಡಲೆಬೇಳೆ ಹಾಗೂ ಕರಿಬೇವು ಹಾಕಿ ಹುರಿಯಿರಿ. ಇದಕ್ಕೆ 3 ½ ಲೋಟ ನೀರು ಸೇರಿಸಿ, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಕುದಿಸಿ. ಈಗ ಹುರಿದಿಟ್ಟುಕೊಂಡಿದ್ದ ಗೋದಿ ನುಚ್ಚು ಸೇರಿಸಿ, ಗಂಟು ಕಟ್ಟಿಕೊಳ್ಳದ ಹಾಗೆ ತಿರುಗಿಸುತ್ತಿರಿ. ಒಂದು ಹದಕ್ಕೆ ಬಂದ ಮೇಲೆ, ಕೊಬ್ಬರಿ ತುರಿ ಸೇರಿಸಿ, ಒಲೆ ಆರಿಸಿ. ಈಗ ಬಿಸಿ ಬಿಸಿ ಗೋದಿ ಉಪ್ಪಿಟ್ಟು ಸವಿಯಲು ರೆಡಿ.
(ಚಿತ್ರಸೆಲೆ: en.wikipedia.org )
ಇತ್ತೀಚಿನ ಅನಿಸಿಕೆಗಳು