ಕವಿತೆ: ನಮನ
– ಶಾರದಾ ಕಾರಂತ್.
ನಮನ
ಕರುಣಾಮೂರ‍್ತಿ
ಗುರುವಿಗೆ ನಮನ
ಕಾಪಾಡು ಎಮ್ಮನು
ಕೊಡು ನಿನ್ನ
ದ್ಯಾನ||
ಮರೆಯಾಗಿಸು ಎಮ್ಮ
ಮನದ ನೋವ
ಮನದಲಿರಿಸು
ತನ್ಮಯತೆ ಬಾವ||
ನಿನ್ನ ಬಜಿಸಿದರೆ
ಜೀವನ ಸುಗಮ
ನಿನ್ನ ಮರೆತರೆ
ಬಾಳಿಕೆ ಪತನ||
ಮನ ನಿನ್ನಲಿರಿಸು
ಹಗಲಿರುಳು ಸತತ
ತನು ನಿನ್ನ ನಾಮದಿ
ದುಡಿಯಲಿ ನಿರತ||
ಎಮ್ಮ ಜೀವವು
ನಿನಗೆ ಮುಡಿಪಾಗಲಿ
ನಿನ್ನ ಕ್ರುಪೆಯ
ಶ್ರೀರಕ್ಶೆ ಎಮ್ಮ ಸಲಹಲಿ||
ಅಣು ರೇಣು ತ್ರುಣ
ಕಾಶ್ಟಗಳಲಿ ನಿನ್ನ ಅರಿತು
ನಡೆಸು ಜೀವನದಿ
ಉಳಿದೆಲ್ಲವ ಮರೆತು||
(ಚಿತ್ರ ಸೆಲೆ: pxhere.com )
ಇತ್ತೀಚಿನ ಅನಿಸಿಕೆಗಳು