ಮೆಂತೆ ನಿಪ್ಪಟ್ಟು
– ಸವಿತಾ.
ಬೇಕಾಗುವ ಸಾಮಾನುಗಳು
- ಮೆಂತೆ ಸೊಪ್ಪು – 1 ಕಪ್
- ಗೋದಿ ಹಿಟ್ಟು – 1 ಕಪ್
- ಸಣ್ಣ [ಬಾಂಬೆ] ರವೆ – 1/2 ಕಪ್
- ಎಣ್ಣೆ – 3 ಚಮಚ
- ಹಸಿ ಮೆಣಸಿನಕಾಯಿ – 2
- ಜೀರಿಗೆ – 1/2 ಚಮಚ
- ಬೆಳ್ಳುಳ್ಳಿ ಎಸಳು – 4
- ಓಂ ಕಾಳು [ಅಜೀವಾಯಿನ್] – 1/4 ಚಮಚ
- ಗರಮ್ ಮಸಾಲೆ ಪುಡಿ -1/2 ಚಮಚ
- ಅರಿಶಿಣ ಸ್ವಲ್ಪ
- ಉಪ್ಪು – ರುಚಿಗೆ ತಕ್ಕಶ್ಟು
ಮಾಡುವ ಬಗೆ
ಮೆಂತೆ ಸೊಪ್ಪು ತೊಳೆದು ಸಣ್ಣಗೆ ಕತ್ತರಿಸಿ ಒಂದು ಪಾತ್ರೆಗೆ ಹಾಕಿ. ಗೋದಿ ಹಿಟ್ಟು, ಸಣ್ಣ ರವೆ, ಮೆಂತೆ ಸೊಪ್ಪು ಸೇರಿಸಿಡಿ. ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಜೀರಿಗೆ, ಓಂ ಕಾಳು ಅರೆದು ಅದೇ ಹಿಟ್ಟಿಗೆ ಸೇರಿಸಿ. ಉಪ್ಪು, ಅರಿಶಿಣ, ಎಣ್ಣೆ, ಗರಮ್ ಮಸಾಲೆ ಪುಡಿ ಸ್ವಲ್ಪ ನೀರು ಹಾಕಿ, ಹಿಟ್ಟು ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ನಾದಿ ಇಟ್ಟುಕೊಳ್ಳಿ.
ಚಪಾತಿಯ ಹಾಗೇ ಲಟ್ಟಿಸಿ, ಮುಳ್ಳು ಚಮಚದ (fork) ಸಹಾಯದಿಂದ ಸಣ್ಣ ಪುಟ್ಟ ರಂದ್ರ ಮಾಡಿ. ಸಾರಿನ ಬಟ್ಟಲಿನಿಂದ ಸಣ್ಣ ಪುರಿ ತರಹ ಕತ್ತರಿಸಿ ಇಟ್ಟುಕೊಳ್ಳಿ. ಎಣ್ಣೆ ಕಾಯಿಸಿ, ಸಣ್ಣ ಉರಿಯಲ್ಲಿಟ್ಟು ಒಂದೊಂದೇ ಕರಿದು ಇಟ್ಟರೇ, ಮೆಂತೆ ನಿಪ್ಪಟ್ಟು ತಯಾರಾಯಿತು. ಇದನ್ನು ಮಾಡಿಟ್ಟು ಕೊಂಡು ವಾರಗಟ್ಟಲೆ ಸವಿಯುವ ಕುರುಕಲು ತಿನಿಸು. ಚಹಾ ವೇಳೆ, ತಿಂಡಿ ಜೊತೆ ತಿನ್ನಬಹುದು.
ಇತ್ತೀಚಿನ ಅನಿಸಿಕೆಗಳು