ಕವಿತೆ: ಬದುಕ ಬೆಳಗಿಸು
ಮನದಂಗಳಕೆ ಲಗ್ಗೆ ಇಟ್ಟು
ಮನಸ ಸೂರೆ ಮಾಡಿ
ಹೊಸ ಆಸೆಗಳ ತಂದೆ ನೀನು
ಅಚ್ಚಳಿಯದ ನೆನಪುಗಳಿಂದ
ಈ ಮನದಲ್ಲೇ ನೆಲೆನಿಂತೆ
ಮೈಮೇಲಿನ ಹಚ್ಚೆಯಂತೆ
ಮರುಮಾತಿಲ್ಲದೆ ಒಲವ ಒಪ್ಪಿದೆನು
ಆ ನಿನ್ನಯ ಮುದ್ದು ಮೊಗವ
ನೋಡುತಾ ಬದುಕ ಕಳೆಯಲು
ಈ ಬದುಕಿನುದ್ದಕೂ ನೀನೇ ಬೇಕು
ನಮ್ಮಿಬ್ಬರ ನುಗುವೆ ತುಂಬಿರಬೇಕು
ಬಾ ಬೇಗ ಈ ಬದುಕ ಬೆಳಗಿಸು
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು