ಚಿಕನ್ ಲೆಗ್ ರೋಸ್ಟ್

– ಕಿಶೋರ್ ಕುಮಾರ್.

 

ಏನೇನು ಬೇಕು
ಮ್ಯಾರಿನೇಟ್ ಮಾಡಲು:
  • ಚಿಕನ್ ಲೆಗ್ ಪೀಸ್ – 5
  • ಮೆಣಸಿನಕಾಯಿ ಪುಡಿ – 1 ಚಮಚ
  • ಶುಂಟಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
  • ಅರಿಶಿಣದ ಪುಡಿ – 1/2 ಚಮಚ
  • ಉಪ್ಪು – 1/2 ಚಮಚ
ಮಸಾಲೆಗೆ:
  • ಕೊತ್ತಂಬರಿ ಬೀಜ – 1 ಚಮಚ
  • ಚಕ್ಕೆ – 1 ಇಂಚು
  • ಲವಂಗ – 3
  • ಮೆಣಸಿನಕಾಳು – ¼ ಚಮಚ
  • ಹಸಿಮೆಣಸಿನಕಾಯಿ – 4
  • ಏಲಕ್ಕಿ – 1
  • ಸೋಂಪು – ¼ ಚಮಚ
  • ಒಣಮೆಣಸಿನಕಾಯಿ – 4
ಅಡುಗೆಗೆ
  • ಅಡುಗೆ ಎಣ್ಣೆ – 4 ಚಮಚ
  • ಜಜ್ಜಿದ ಬೆಳ್ಳುಳ್ಳಿ ಎಸಳು – 5
  • ಕರಿಬೇವು – ಸ್ವಲ್ಪ
  • ಈರುಳ್ಳಿ – 2
  • ಹಸಿಮೆಣಸಿನಕಾಯಿ – 3
  • ನೀರು – 1 ಲೋಟ
  • ಕೊತ್ತಂಬರಿ ಸೊಪ್ಪು ಸ್ವಲ್ಪ
ಮಾಡುವ ಬಗೆ
ಹಂತ 1 ಚಿಕನ್ ಮ್ಯಾರಿನೇಟ್

ಒಂದು ಪಾತ್ರೆಗೆ ಚಿಕನ್, ಮೆಣಸಿನಕಾಯಿ ಪುಡಿ, ಶುಂಟಿ ಬೆಳ್ಳುಳ್ಳಿ ಪೇಸ್ಟ್, ಅರಿಶಿಣದ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ, ಚಿಕನ್ ಮೇಲೆ ಕೋಟ್ ಮಾಡಿ 30 ನಿಮಿಶ ಬಿಡಿ.

ಹಂತ 2 ಮಸಾಲೆ

ಒಂದು ಪ್ಯಾನ್ ನಲ್ಲಿ ಮದ್ಯಮ ಉರಿಯಲ್ಲಿ, ಕೊತ್ತಂಬರಿ ಬೀಜ, ಚಕ್ಕೆ, ಸೋಂಪು, ಮೆಣಸು, ಏಲಕ್ಕಿ, ಒಣಮೆಣಸಿನಕಾಯಿ ಹಾಕಿ 2 ರಿಂದ 3 ನಿಮಿಶ ಹುರಿದು ಒಲೆ ಆರಿಸಿ. ತಣ್ಣಗಾದ ಮೇಲೆ ಒಂದು ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಹಂತ 3 ಅಡುಗೆ

ಒಂದು ಪಾತ್ರೆಗೆ ಅಡುಗೆ ಎಣ್ಣೆ ಹಾಕಿ, ಮದ್ಯಮ ಉರಿಯಲ್ಲಿಟ್ಟು, ಬೆಳ್ಳುಳ್ಳಿ ಹಾಕಿ ಕೆಂಪಗಾಗುವವರೆಗೂ ಹುರಿಯಿರಿ. ಈಗ ಕರಿಬೇವು, ಸಣ್ಣಗೆ ಕತ್ತರಿಸಿದ ಈರುಳ್ಳಿ, ಸೀಳಿದ ಹಸಿಮೆಣಸಿನಕಾಯಿ ಹಾಕಿ ಈರುಳ್ಳಿ ಮೆತ್ತಗಾಗುವವರೆಗೂ ಹುರಿಯಿರಿ. ಇದಕ್ಕೆ ಮ್ಯಾರಿನೇಟ್ ಮಾಡಿದ್ದ ಚಿಕನ್ ಹಾಕಿ ಒಂದು ಪ್ಲೇಟ್ ನಿಂದ ಪಾತ್ರೆಯನ್ನು ಮುಚ್ಚಿ 1 ನಿಮಿಶ ಬೇಯಿಸಿ. ಈಗ ರುಬ್ಬಿಟ್ಟುಕೊಂಡಿದ್ದ 3 ಚಮಚ ಮಸಾಲೆಯನ್ನು ಹಾಕಿ, 1 ಲೋಟ ನೀರು ಸೇರಿಸಿ ಕಲಸಿ. ಮತ್ತೆ ಪ್ಲೇಟ್ ಮುಚ್ಚಿ 15 ರಿಂದ 20 ನಿಮಿಶ ಬೇಯಿಸಿ. ನಂತರ ಕರಿಬೇವು ಹಾಗೂ ಕೊತ್ತಂಬರಿಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಮೇಲೆ ಉದುರಿಸಿ. ಈಗ ಚಿಕನ್ ಲೆಗ್ ರೋಸ್ಟ್ ರೆಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *