ಹಸಿರು ಚಟ್ನಿ
– ಸವಿತಾ.
ಏನೇನು ಬೇಕು
- ಕೊತ್ತಂಬರಿ ಸೊಪ್ಪು – 2 ಬಟ್ಟಲು
- ಪುದೀನಾ – 1 ಬಟ್ಟಲು
- ಹಸಿ ಮೆಣಸಿನಕಾಯಿ – 4
- ಜೀರಿಗೆ – 1/2 ಚಮಚ
- ಬೆಳ್ಳುಳ್ಳಿ ಎಸಳು – 8
- ಹಸಿ ಶುಂಟಿ – ಸ್ವಲ್ಪ
- ಗರಮ್ ಮಸಾಲೆ ಪುಡಿ – 1/2 ಚಮಚ
- ಕೊತ್ತಂಬರಿ[ದನಿಯಾ] ಪುಡಿ – 1/2 ಚಮಚ
- ಉಪ್ಪು – ರುಚಿಗೆ ತಕ್ಕ ಶ್ಟು
- ಸಕ್ಕರೆ – ಸ್ವಲ್ಪ
- ಮೊಸರು – 2 ಚಮಚ
- ಹುರಿಗಡಲೆ[ಪುಟಾಣಿ] – 2 ಚಮಚ
- ಮೊಸರು – ಸ್ವಲ್ಪ
ಮಾಡುವ ವಿದಾನ
ಹುರಿಗಡಲೆ, ಜೀರಿಗೆ ಸ್ವಲ್ಪ ಹುರಿದು ತೆಗೆದಿಡಿ. ಮಿಕ್ಸರ್ ಜಾರ್ ಗೆ ಪುದೀನಾ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಹುರಿದ ಪುಟಾಣಿ [ಹುರಿಗಡಲೆ], ಜೀರಿಗೆ, ಬೆಳ್ಳುಳ್ಳಿ, ಹಸಿ ಶುಂಟಿ, ಕೊತ್ತಂಬರಿ ಪುಡಿ, ಗರಮ್ ಮಸಾಲೆ ಪುಡಿ, ಉಪ್ಪು, ಸಕ್ಕರೆ, ಸ್ವಲ್ಪ ನೀರು, ಮೊಸರು ಸೇರಿಸಿ ರುಬ್ಬಿ ತೆಗೆಯಿರಿ.
ಇದನ್ನು ಪ್ರಿಡ್ಜ್ ನಲ್ಲಿಟ್ಟರೆ ಒಂದು ವಾರ ಉಪಯೋಗಿಸಬಹುದು. ಚಪಾತಿ, ಸ್ಯಾಂಡ್ವಿಚ್, ಚಾಟ್ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು