ಮಾಡಿ ಸವಿಯಿರಿ ಚೀಸ್ ಪಾಸ್ತಾ
ಏನೇನು ಬೇಕು
- ಪೆನ್ನೆ ಪಾಸ್ತಾ – 1 ಕಪ್
- ಉಪ್ಪು – ರುಚಿಗೆ ತಕ್ಕಶ್ಟು
- ಆಲಿವ್ ಎಣ್ಣೆ – 4 ಚಮಚ
- ಪಾಸ್ತಾ ಪೌಡರ್ – 30 ಗ್ರಾಮ್
- ದೊಡ್ಡ ಮೆಣಸಿನಕಾಯಿ – 3 – ಕೆಂಪು (1), ಹಳದಿ (1), ಹಸಿರು (1)
- ಈರುಳ್ಳಿ – 3
- ಈರುಳ್ಳಿ ಎಲೆ – ಸ್ವಲ್ಪ (ಅಲಂಕಾರಕ್ಕೆ)
- ಬೆಳ್ಳುಳ್ಳಿ – 5 ಎಸಳು
- ಹಾಲು – 2 ಕಪ್
- ಕರಿಮೆಣಸಿನ ಪುಡಿ – ¼ ಚಮಚ
- ಮೆಣಸಿನಕಾಯಿ ಬೀಜ – 1 ಚಮಚ
- ಓರಿಗಾನೊ – 1 ಚಮಚ
- ಚೀಸ್ – 100 ಗ್ರಾಮ್
ಮಾಡುವ ಬಗೆ
ಒಂದು ಪಾತ್ರೆಗೆ ನೀರು, 1 ಚಮಚ ಆಲಿವ್ ಎಣ್ಣೆ ಹಾಗೂ ಸ್ವಲ್ಪ ಉಪ್ಪು ಸೇರಿಸಿ ಕುದಿಸಿ. ಕುಡಿಯುತ್ತಿರುವಾಗ ಪೆನ್ನೆ ಪಾಸ್ತಾ ಹಾಕಿ ಮೆತ್ತಗಾಗುವವರೆಗೆ ಕುದಿಸಿ.
ಒಂದು ಪ್ಯಾನ್ ಗೆ 3 ಚಮಚ ಆಲಿವ್ ಎಣ್ಣೆ, ಸಣ್ಣದಾಗಿ ಕತ್ತರಿಸಿದ ಬೆಳ್ಳುಳ್ಳಿ ಎಸಳು, ಕತ್ತರಿಸಿದ ಈರುಳ್ಳಿ ಹಾಕಿ ಕೆಂಪಗಾಗುವವರೆಗೂ ಹುರಿಯಿರಿ. ನಂತರ ಕತ್ತರಿಸಿದ ದೊಡ್ಡ ಮೆಣಸಿನಕಾಯಿ ಹಾಕಿ ಹುರಿಯಿರಿ. ಇದಕ್ಕೆ ಪಾಸ್ತಾ ಪೌಡರ್ ಹಾಕಿ, ಪೌಡರ್ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ಈಗ ಹಾಲು ಸೇರಿಸಿ ಕಾಯಿಸಿ, ಇದಕ್ಕೆ ಉಪ್ಪು, ಮೆಣಸಿನ ಪುಡಿ, ಓರಿಗಾನೊ, ಮೆಣಸಿನಕಾಯಿ ಬೀಜ ಮತ್ತು ಚೀಸ್ ಹಾಕಿ ಕುದಿಸಿ. ಇದಕ್ಕೆ ಬೇಯಿಸಿದ ಪಾಸ್ತಾ ಸೇರಿಸಿ ಸ್ವಲ್ಪ ನೀರಿನಾಂಶ ಹೋಗುವವರೆಗೂ ಬೇಯಿಸಿ. ಇದರ ಮೇಲೆ ಕತ್ತರಿಸಿದ ಈರುಳ್ಳಿ ಎಲೆಯನ್ನು ಉದುರಿಸಿ. ಈಗ ಪಾಸ್ತಾ ಸವಿಯಲು ರೆಡಿ.
(ಸಾಂದರ್‍ಬಿಕ ಚಿತ್ರಸೆಲೆ: deepai.org )
ಇತ್ತೀಚಿನ ಅನಿಸಿಕೆಗಳು