ಮಾಡಿ ಸವಿಯಿರಿ ಮಸಾಲಾ ಪುರಿ

– ಸವಿತಾ.

ಬೇಕಾಗುವ ಸಾಮಾನುಗಳು

  • ಚಾಟ್ ಪುರಿ – 20
  • ಹಸಿರು ಬಟಾಣಿ – 1 ಬಟ್ಟಲು
  • ಆಲೂಗಡ್ಡೆ – 4
  • ಈರುಳ್ಳಿ – 3
  • ಟೊಮೆಟೊ – 4
  • ಹಸಿ ಶುಂಟಿ – ಅರ್‍ದ ಇಂಚು
  • ಹಸಿರು ಚಟ್ನಿ – ಸ್ವಲ್ಪ
  • ಹುಣಸೆ ಸಿಹಿ [ಇಮಲಿ] ಚಟ್ನಿ – ಸ್ವಲ್ಪ
  • ಉಪ್ಪು ರುಚಿಗೆ ತಕ್ಕಶ್ಟು
  • ಒಣ ಕಾರದ ಪುಡಿ – ಅರ್‍ದ ಚಮಚ
  • ಗರಮ್ ಮಸಾಲೆ ಪುಡಿ – ಅರ್‍ದ ಚಮಚ
  • ಚಾಟ್ ಮಸಾಲೆ ಪುಡಿ ಸ್ವಲ್ಪ
  • ಎಣ್ಣೆ – 1 ಚಮಚ
  • ಜೀರಿಗೆ – ಅರ್‍ದ ಚಮಚ
  • ಲವಂಗ – 4
  • ಅರಿಶಿಣ ಸ್ವಲ್ಪ
  • ಸೇವ್ – 1 ಬಟ್ಟಲು

ಮಾಡುವ ಬಗೆ:

ಮೊದಲಿಗೆ ಬಟಾಣಿ ರಾತ್ರಿ ತೊಳೆದು ನೆನೆ ಹಾಕಿಡಿ (ಅಂದಾಜು 8 ತಾಸು). ನಂತರ ಆಲೂಗಡ್ಡೆ ಮತ್ತು ಬಟಾಣಿ ಬೇರೆ ಬೇರೆ ಇಟ್ಟು ಕುದಿಸಿ ತೆಗೆಯಿರಿ. ಈರುಳ್ಳಿ, ಟೊಮೆಟೊ ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿರಿ. ಹಸಿ ಶುಂಟಿ ಸ್ವಲ್ಪ ಕತ್ತರಿಸಿ ಇಡಿ. ಕೊತ್ತಂಬರಿ ಸೊಪ್ಪು ಸ್ವಲ್ಪ ಕತ್ತರಿಸಿ ಇಟ್ಟುಕೊಳ್ಳಿರಿ. ಹಸಿರು ಚಟ್ನಿ ಮತ್ತು ಸಿಹಿ ಕಾರಾ ಹುಣಸೆ ಚಟ್ನಿ ಮಾಡಿ ಇಡಿ. ಈಗ ಬಾಣಲೆಗೆ ಎಣ್ಣೆ ಹಾಕಿ, ಬಿಸಿ ಮಾಡಿ ಜೀರಿಗೆ, ಲವಂಗ ಹಸಿ ಶುಂಟಿ ಮತ್ತು ಕತ್ತರಿಸಿದ ಅರ‍್ದ ಈರುಳ್ಳಿ, ಅರ‍್ದ ಟೊಮೆಟೊ ಮಾತ್ರ ಹಾಕಿ ಹುರಿಯಿರಿ. ಕುದಿಸಿದ ಬಟಾಣಿ ಸ್ವಲ್ಪ ಮಿಕ್ಸರ‍್ ನಲ್ಲಿ ರುಬ್ಬಿ ಸೇರಿಸಿ. ಈಗ ಆಲೂಗಡ್ಡೆ ಸಿಪ್ಪೆ ತೆಗೆದು ಪುಡಿ ಮಾಡಿ ಸೇರಿಸಿ ನೀರು ಹಾಕಿ ಕುದಿಸಿರಿ.

ಉಪ್ಪು, ಅರಿಶಿಣ, ಒಣ ಕಾರದ ಪುಡಿ, ಗರಮ್ ಮಸಾಲೆ ಪುಡಿ ಹಾಕಿ ಸ್ವಲ್ಪ ಕುದಿಸಿ. ಸ್ವಲ್ಪ ಹಸಿರು ಚಟ್ನಿ, ಸ್ವಲ್ಪಹುಣಸೆ ಹಣ್ಣಿನ ಚಟ್ನಿ ಹಾಕಿ ಉರಿ ಆರಿಸಿ. ಒಂದು ತಟ್ಟೆಗೆ ಚಾಟ್ ಪುರಿ ಇಟ್ಟು ಕುದಿಸಿದ ಮಸಾಲೆ ಹಾಕಿ ನಂತರ ಚಾಟ್ ಮಸಾಲಾ ಪುಡಿ ಸ್ವಲ್ಪ ಉದುರಿಸಿ. ಹಸಿರು ಚಟ್ನಿ, ಹುಣಸೆ ಹಣ್ಣಿನ ಚಟ್ನಿ ಸ್ವಲ್ಪ ಹಾಕಿರಿ. ಕತ್ತರಿಸಿದ ಟೊಮೆಟೊ, ಈರುಳ್ಳಿ, ಕೊತ್ತಂಬರಿ ಸೊಪ್ಪು ಸ್ವಲ್ಪ ಮೇಲೆ ಹಾಕಿರಿ. ಕೊನೆಗೆ ಸೇವ್ ಉದುರಿಸಿ
ಈಗ ಮಸಾಲಾ ಪುರಿ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *