ಕವಿತೆ: ನೀನು
ನೀನು ಒಂತರಾ ರುತುಮಾನ
ನಿನಗಿಲ್ಲ ಒಂದಿಶ್ಟು ಬಿಗುಮಾನ
ನಿನ್ನದೇ ನೆನಪು ನನಗೆ ಅನುದಿನ
ನಿನಗಾಗಿಯೇ ಮುಡಿಪು ಈ ಜೀವನ
ನಿನ್ನ ಪ್ರೀತಿಯೇ ಮಳೆಗಾಲ
ನಿನ್ನ ಕೋಪವೇ ಬೇಸಿಗೆಕಾಲ
ನಿನ್ನ ಸನಿಹವೇ ಚಳಿಗಾಲ
ನಿನಗಾಗಿಯೇ ಕಾಯುವೆ ಅನುಗಾಲ
ನೀ ಬಂದೆ ನನ್ನ ಬರಡಾದ ಬಾಳಿಗೆ
ನೀ ತಂದೆ ಸುಕ ಸಂತಸದ ಗಳಿಗೆ
ನೀ ತುಂಬಿದೆ ನನ್ನ ಬಾಳಲ್ಲಿ ಪ್ರೀತಿ
ನೀನಾದೆ ನನ್ನ ಬಾಳಿಗೆ ಜ್ಯೋತಿ
ನೀನೇ ನನ್ನೆಲ್ಲಾ ಬಾವನೆಗಳ ಕೈಗನ್ನಡಿ
ನೀನೇ ತಾನೇ ನನ್ನ ಬಾಳ ಮುನ್ನುಡಿ
ನೀನೇ ಆಗಿರುವೆ ನನ್ನಯ ಜೀವನಾಡಿ
ನಮ್ಮದು ಆ ದೇವರೇ ಬೆಸೆದ ಜೋಡಿ
ನೀನು ನನಗಾಗಿ ಹುಟ್ಟಿ ಬಂದಿರುವೆ
ನೀನು ನನ್ನ ಕೈಹಿಡಿದು ಸಾಗಿರುವೆ
ನೀನು ಶಿವನ ಜೀವನವ ಬೆಳಗಿರುವೆ
ನೀನು ಶಿವನ ಜೀವ ಜೀವನವಾಗಿರುವೆ
(ಚಿತ್ರ ಸೆಲೆ: pxhere.com)
ಇತ್ತೀಚಿನ ಅನಿಸಿಕೆಗಳು