ಮಾಡಿ ನೋಡಿ ರುಚಿಯಾದ ಕೇಸರಿ ಬಾತ್
ಏನೇನು ಬೇಕು ?
- ರವೆ – 1 ಕಪ್ (ಹುರಿದು ಸಣ್ಣ ಉರಿಯಲ್ಲಿ ಇಟ್ಟುಕೊಳ್ಳಿ)
- ಸಕ್ಕರೆ – 2 ಕಪ್
- ನೀರು – 3 ಕಪ್
- ತುಪ್ಪ – 1 ಕಪ್ (ಅತವಾ ರುಚಿಗೆ ತಕ್ಕಂತೆ)
- ಏಲಕ್ಕಿ ಪುಡಿ – ಅರ್‍ದ ಟೀ ಚಮಚ
- ಕೇಸರಿ ದಳಗಳು – ಸ್ವಲ್ಪ
- ಗೋಡಂಬಿ – 10-15
- ಒಣ ದ್ರಾಕ್ಶಿ – 10-15
- ಲವಂಗ – 2
ಮಾಡುವ ಬಗೆ:
ಮೊದಲಿಗೆ ಸಣ್ಣ ಉರಿಯಲ್ಲಿ ರವೆ ಹುರಿದುಕೊಳ್ಳಿರಿ. ಆಮೇಲೆ ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಅದಕ್ಕೆ ದ್ರಾಕ್ಶಿ, ಗೋಡಂಬಿ, ಲವಂಗ ಸೇರಿಸಿ; ಗೋಡಂಬಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ಒಮ್ಮೆ ಗೋಡಂಬಿ ಮತ್ತು ದ್ರಾಕ್ಶಿ ಚೆನ್ನಾಗಿ ಹುರಿದ ನಂತರ, ರವೆ ಸೇರಿಸಿ ನಿದಾನವಾಗಿ ಮಿಶ್ರಣ ಮಾಡಿ. ಈ ಹಂತದಲ್ಲಿ ಕೇಸರಿ ದಳಗಳನ್ನು ಸಹ ಸೇರಿಸಿ. ಉರಿಯನ್ನು ಸಣ್ಣಗೆ ಇಡಿ. ಈಗ ಸಕ್ಕರೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ರವೆ ಮತ್ತು ಸಕ್ಕರೆ ನಿದಾನವಾಗಿ ಮಿಶ್ರಣವಾದ ನಂತರ, 3 ಕಪ್ ನೀರು ಸೇರಿಸಿ ನಿದಾನವಾಗಿ ಮಿಶ್ರಣ ಮಾಡಿ ಮತ್ತು ನೀರು ಸೇರಿಸಿದ ನಂತರ ರವೆ ಗಂಟಾಗದಂತೆ ನೋಡಿಕೊಳ್ಳಿ. ಈಗ ಉರಿಯನ್ನು ಕಡಿಮೆ ಮಾಡಿ ನಿದಾನವಾಗಿ ಬೇಯಿಸಿ. ಜೊತೆಜೊತೆಗೆ ತುಪ್ಪವನ್ನು ಸೇರಿಸುತ್ತಾ ನಿದಾನವಾಗಿ ಕಲಿಸುತ್ತಾ ಇರಿ. ಈ ಮಿಶ್ರಣವು ಗಟ್ಟಿಯಾಗುವವರೆಗೆ, ಬಾಣಲೆಯ ಬದಿಗಳನ್ನು ಬಿಡುವವರೆಗೆ ಮತ್ತು ತುಪ್ಪ ಬೇರ‍್ಪಡಲು ಪ್ರಾರಂಬವಾಗುವವರೆಗೆ ಸಣ್ಣ ಉರಿಯಲ್ಲಿ ಅಡುಗೆ ಮುಂದುವರಿಸಿ ಹಾಗೂ ಕಲಿಸುತ್ತಾ ಇರಿ. ಕೊನೆಗೆ 5-10 ನಿಮಿಶ ಬೇಯಲು ಬಿಡಿ, ಈಗ ಬಿಸಿ ಬಿಸಿ ಕೇಸರಿ ಬಾತ್ ಸವಿಯಲು ಸಿದ್ದವಾಗಿದೆ.
(ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು