ಕವಿತೆ: ಮಹಾಸತ್ಯ
ಈ ವಾಚಿಗೆ ನನ್ನ ಮೇಲೆ ತುಂಬಾ ಪ್ರೀತಿ
ಕಟ್ಟಿಕೊಂಡರೆ ಮಾತ್ರ ನಡೆಯುವುದು ಇದರ ನೀತಿ
ನನಗೋ ಅದ ಕಂಡರೆ ಬಲು ಬೇಸರ
ಬಿಚ್ಚಿ ಮೊಳೆಗೆ ನೇತುಹಾಕಿದೆನೋ ಆಸ್ಪರ‍್ಶಾಂತ ಮುಶ್ಕರ
ನಾ ಪ್ರೀತಿಸದ ಯಾವುದನ್ನೂ ನನ್ನದೆಂದು ಹೇಳಿಕೊಳ್ಳಲಾರೆ
ಆದರೂ ಇದ ಸದಾ ಕಟ್ಟಿಕೊಂಡಿರಬೇಕು
ಅಶ್ಟೇ ಅಲ್ಲ ನೋಡುತ್ತಲೇ ಇರಬೇಕು
ಯಾಕೆಂದರೆ ಅದು ನನ್ನ ತುಂಬಾ ಪ್ರೀತಿಸುತ್ತದಂತೆ
ಇದರ ಮುಂದೆ ನಾನು ಬರಿಯ ಬೆಂತರ
ಹಿತಶತ್ರು ಕೊಲೆಪಾತಕ ನಿಶ್ಕರುಣಿ
ಬಂದುದೆಲ್ಲ ತಿಂದು ಮುಗಿಸಿ
ಬರುವುದಕೆ ಬಾಯ್ತೆರೆದು ಕೂತಿದೆ
ಅಹರ‍್ನಿಶಿ ತಿನ್ನುತ್ತಲೇ ಇರುತ್ತದೆ
ಹಿಂಗಲಾರದ ಹಸಿವು
ಇದರುದರದಾಳವ ಅರಿತವರು ಯಾರು
ಶಿವ ತಾಂಡವವ ದಿನವೂ ಮಾಡುವುದಿಲ್ಲ
ಆದರಿದು ಕ್ಶಣವೂ ನಿಲ್ಲಿಸುವುದಿಲ್ಲ
ಲೋಕದ ತುಂಬ ಕೈಕಾಲಾಡಿಸಿ
ಮಹಾಬಯಂಕರ ರುದ್ರನರ‍್ತನ
ಸಮಸ್ತ ಸ್ರುಶ್ಟಿಯೂ ಇದರದೀನ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು