ಏರ್ ಪ್ರೈಡ್ ಕಾರ‍್ನ್ ಸಲಾಡ್
ಏನೇನು ಬೇಕು
- ಬೇಯಿಸಿದ ಸಿಹಿ ಜೋಳ (Sweet corn) – 250 ಗ್ರಾಂ
- ಈರುಳ್ಳಿ – 1 ಸಣ್ಣದು
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಶ್ಟು
- ಚಾಟ್ ಮಸಾಲಾ – 1 ಟೀಸ್ಪೂನ್
- ಅಕ್ಕಿ ಹಿಟ್ಟು – 1 ಟೀಸ್ಪೂನ್
ಮಾಡುವ ಬಗೆ
ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಸಿಹಿ ಜೋಳ ಮತ್ತು ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಕಲಸಿ. ಅಕ್ಕಿ ಹಿಟ್ಟು ಸಿಹಿ ಜೋಳದೊಂದಿಗೆ ಚೆನ್ನಾಗಿ ಬೆರೆಯುವಂತೆ ನೋಡಿಕೊಳ್ಳಿ. ಈ ಮಿಶ್ರಣವನ್ನು ಏರ್ ಪ್ರೈಯರ್ ನಲ್ಲಿ 150° ಡಿಗ್ರಿ ತಾಪಮಾನದಲ್ಲಿ ಸುಮಾರು 12 ನಿಮಿಶಗಳ ಕಾಲ ಇರಿಸಿ. ನಂತರ, ಜೋಳವನ್ನು ಹೊರತೆಗೆದು, ಅದಕ್ಕೆ ಹೊಸದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಚಾಟ್ ಮಸಾಲಾ ಮತ್ತು ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ. ಸಲಾಡ್ ಅನ್ನು ಆನಂದಿಸಿ
ಇತ್ತೀಚಿನ ಅನಿಸಿಕೆಗಳು