ಹುರಿದ ಸಿಲ್ವರ್ ಮೀನು

ರೇಶ್ಮಾ ಸುದೀರ್.

IMG-20140821-WA0018

ಬೇಕಾಗುವ ಪದಾರ‍್ತಗಳು:

ಶುಚಿ ಮಾಡಿದ ಸಿಲ್ವರ್ ಮೀನು – 1/2ಕೆ.ಜಿ
ಅಚ್ಚಕಾರದ ಪುಡಿ——- 3 ಟಿ ಚಮಚ
ಅರಿಸಿನ————- ಚಿಟಿಕೆ
ಚಿರೊಟಿ ರವೆ——— 3 ಟಿ ಚಮಚ
ಅಕ್ಕಿಹಿಟ್ಟು———— 1 ಟಿ ಚಮಚ
ನಿಂಬೆಹಣ್ಣಿನ ರಸ——- 2 ಟಿ ಚಮಚ
ಉಪ್ಪು————– ರುಚಿಗೆ ತಕ್ಕಶ್ಟು
ತೆಂಗಿನ ಎಣ್ಣೆ——— 2 ಟೇಬಲ್ ಚಮಚ

ಮಾಡುವ ಬಗೆ:

ಶುಚಿ ಮಾಡಿದ ಮೀನಿಗೆ ಮೇಲೆ ಹೇಳಿದ ಎಲ್ಲಾ ಪದಾರ‍್ತಗಳನ್ನು ಹಾಕಿ ಕಲಸಿ, ಕಡಿಮೆ ಅಂದರೆ 2-3 ಗಂಟೆ ನೆನೆಯಲು ಬಿಡಿ. ಇವತ್ತು ಕಲಸಿ ಪ್ರಿಡ್ಜಿನಲ್ಲಿ ಇಟ್ಟು ನಾಳೆ ಹುರಿದರೆ ಚೆನ್ನಾಗಿ ಉಪ್ಪು, ಕಾರ, ಹುಳಿ ಹಿಡಿದಿರುತ್ತೆ.
ಒಂದು ಕಾವಲಿಯಲ್ಲಿ(ನಾನ್ ಸ್ಟಿಕ್ ಒಳ್ಳೆಯದು)ಎರಡು ಚಮಚ ತೆಂಗಿನ ಎಣ್ಣೆ ಬಿಸಿಗೆ ಇಟ್ಟು ನೆನೆಸಿಟ್ಟ ಮೀನು ಹಾಕಿ, ಎರಡು ಬದಿ ಮಗುಚಿ ಚೆನ್ನಾಗಿ ಹುರಿಯಿರಿ. ಇದೇ ರೀತಿ ಬೇರೆ ಬೇರೆ ಜಾತಿಯ ಮೀನಿನಲ್ಲೂ ಮಾಡಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: