ಚಿಕನ್ ಗೀ ರೋಸ್ಟ್
ಏನೇನು ಬೇಕು
- ಕತ್ತರಿಸಿದ ಕೋಳಿ – ½ ಕಿಲೋ
- ತುಪ್ಪ – 5 ಚಮಚ
- ಈರುಳ್ಳಿ – 1
- ಕರಿಬೇವು – 10 ಎಲೆ
- ಪುಡಿ ಬೆಲ್ಲ – ½ ಚಮಚ
- ಹುಣಸೆಹಣ್ಣು – ಸ್ವಲ್ಪ (ಸಣ್ಣ ಗೋಲಿಯ ಗಾತ್ರ)
- ಗೋಡಂಬಿ – 8
- ಬೆಳ್ಳುಳ್ಳಿ – 7 ಎಸಳು
- ಚಕ್ಕೆ – 2 ಚಿಕ್ಕ ತುಂಡು
- ಲವಂಗ – 2
- ಏಲಕ್ಕಿ – 2 (ಜಜ್ಜಿ ಪುಡಿ ಮಾಡಿಕೊಳ್ಳಿ)
- ಕಪ್ಪು ಮೆಣಸು – 1 ಚಮಚ
- ಕೊತ್ತಂಬರಿ ಬೀಜ (ದನ್ಯಾ) – 5 ಚಮಚ
- ಒಣಮೆಣಸಿನಕಾಯಿ – 10
- ಅರಿಶಿಣ – ½ ಚಮಚ
- ಶುಂಟಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಮೊಸರು – 2 ಚಮಚ
- ಮೆಂತ್ಯ – ¼ ಚಮಚ
- ಜೀರಿಗೆ – 1 ಚಮಚ
- ಸೋಂಪು – 1 ಚಮಚ
ಮಾಡುವ ಬಗೆ
ಒಂದು ಪಾತ್ರೆಗೆ ಮೊಸರು, ಶುಂಟಿ ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಸ್ವಲ್ಪ ಉಪ್ಪು, ಕತ್ತರಿಸಿದ ಕೋಳಿ ಹಾಕಿ ಚೆನ್ನಾಗಿ ಕಲಸಿ, 30 ನಿಮಿಶ ನೆನೆಯಲು ಬಿಡಿ.
ಒಂದು ಬಾಣಲೆಗೆ ಸೋಂಪು, ಚಕ್ಕೆ, ಲವಂಗ, ಏಲಕ್ಕಿ ಪುಡಿ, ಜೀರಿಗೆ, ಮೆಣಸು, ಮೆಂತ್ಯ, ಕೊತ್ತಂಬರಿ ಬೀಜ ಹಾಗೂ ಒಣ ಮೆಣಸಿನಕಾಯಿ ಹಾಕಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಇದನ್ನು ಒಂದು ಜಾರ್ ಗೆ ಹಾಕಿ, ಇದಕ್ಕೆ ಬೆಳ್ಲುಳ್ಳಿ, ಗೋಡಂಬಿ, ಹುಣಸೆಹಣ್ಣು, ಬೆಲ್ಲ ಹಾಗೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ಬಾಣಲೆಗೆ 4 ಚಮಚ ತುಪ್ಪ ಹಾಕಿ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವ ಹಾಗೆ ಹುರಿಯಿರಿ, ಇದಕ್ಕೆ ರುಬ್ಬಿಟ್ಟುಕೊಂಡಿದ್ದ ಮಸಾಲೆಯನ್ನು ಹಾಕಿ 10 ನಿಮಿಶ ಮಂದ ಉರಿಯಲ್ಲಿ ಬೇಯಿಸಿ. ನಂತರ ನೆನೆಸಿಟ್ಟಿದ್ದ ಚಿಕನ್ ಹಾಕಿ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಹಾಗೂ ಕರಿಬೇವಿನ ಎಲೆ ಹಾಕಿ ಚಿಕನ್ ಬೇಯುವವರೆಗೂ (15 ರಿಂದ 20 ನಿಮಿಶ) ಚೆನ್ನಾಗಿ ಬೇಯಿಸಿ. ನಂತರ 1 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲಸಿ ಮುಚ್ಚಿ. ಈಗ ಚಿಕನ್ ಗೀ ರೋಸ್ಟ್ ರೆಡಿ.
( ಸಾಂದರ್ಬಿಕ ಚಿತ್ರಸೆಲೆ: zomato.com )
ಇತ್ತೀಚಿನ ಅನಿಸಿಕೆಗಳು