ಕವಿತೆ: ಸಿರಿಗೌರಿ ಬರುವಳು
ಸಿರಿಗೌರಿ ಬರುವಳು
ಸಿರಿಯನ್ನು ತರುವಳು
ಬಾದ್ರಪದದ ತದಿಗೆಯಲಿ
ಮಂಗಳದ ದಿನದಂದು
ಸ್ವರ‍್ಣ ಗೌರಿ ಬರುವಳು
ಗಜವದನನ ತಾಯಿ ಗಿರಿಜೆ ಬರುವಳು
ಜಗನ್ಮಾತೆ ಜಯ ಗೌರಿ ಬರುವಳು
ಬಂಗಾರದ ಬಣ್ಣದವಳು
ಬಂಗಾರದೊಡವೆ ತೊಡುವಳು
ಮಂಗಳೆಯರ ಮಂಗಳ ಹಾಡಿಗೆ
ಮಂದಹಾಸವ ಬೀರುವಳು
ಪರಶಿವನ ಸತಿ ಪಾರ‍್ವತಿ ಬರುವಳು
ಪರ‍್ವತರಾಜನ ಕುವರಿ ಮುದ್ದು ಗೌರಿ ಬರುವಳು
ತವರಿನ ಪ್ರೀತಿಯನು ನೆನಪಿಸುವ
ಬಾಗೀನದ ರೂಪ ಇವಳು
ಕಾರುಣ್ಯಕೆ ಕರಗುವಳು
ಮುತ್ತೈದೆಯರನು ಕಾಯ್ವಳು
ಶರಣರೆಲ್ಲರನು ಹರಸುವಳು.
(ಚಿತ್ರಸೆಲೆ: flipkart.com )
ಇತ್ತೀಚಿನ ಅನಿಸಿಕೆಗಳು