ಮೆಂತ್ಯ ಲಾಡು

– ಸವಿತಾ.

ಏನೇನು ಬೇಕು

  • ಮೆಂತ್ಯ ಕಾಳು – 1 ಲೋಟ
  • ಹಾಲು – 1 ಲೋಟ
  • ಅಂಟು – 1 ಲೋಟ
  • ಬಾದಾಮಿ – 1 ಲೋಟ
  • ತುಪ್ಪ – 3/4 ಲೋಟ
  • ಗೋದಿ ಹಿಟ್ಟು – 1 ಲೋಟ
  • ಒಣ ಕೊಬ್ಬರಿ ತುರಿ – 2 ಲೋಟ
  • ಬೆಲ್ಲ – 2 ಲೋಟ

ಮಾಡುವ ಬಗೆ

ಮೆಂತ್ಯ ಕಾಳು ಹುರಿದು ಮಿಕ್ಸರ್ ನಲ್ಲಿ ಪುಡಿ ಮಾಡಿ. ಹಾಲು ಮತ್ತು ಮೆಂತ್ಯ ಪುಡಿ ಸೇರಿಸಿ ಎರಡು ತಾಸು ಇಡಿ. ಒಣ ಕೊಬ್ಬರಿ ತುರಿದು ಇಟ್ಟುಕೊಳ್ಳಿ. ಸ್ವಲ್ಪ ತುಪ್ಪ ಕಾಯಿಸಿ, ಅಂಟು ಕರಿದು ತೆಗೆದಿಡಿ. ಅದೇ ತುಪ್ಪದಲ್ಲಿ ಬಾದಾಮಿ ಸ್ವಲ್ಪ ಹುರಿದು ತೆಗೆದಿಟ್ಟು, ನಂತರ ಒಣ ಕೊಬ್ಬರಿ ತುರಿ ಹುರಿದು ಸ್ವಲ್ಪ ಮಿಕ್ಸ‍ರ್ ನಲ್ಲಿ ತಿರುಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಸ್ವಲ್ಪ ತುಪ್ಪ ಹಾಕಿ ಗೋದಿ ಹಿಟ್ಟು ಹುರಿದು ತೆಗೆಯಿರಿ. ಮೆಂತ್ಯ ಹಿಟ್ಟು ಹಾಲು ಹೀರಿದ್ದನ್ನು ತುಪ್ಪ ಹಾಕಿ ಚೆನ್ನಾಗಿ ಹುರಿದು ತೆಗೆದಿಡಿ. ಬೆಲ್ಲ ಮತ್ತು 1/4 ಲೋಟ ನೀರು ಹಾಕಿ ಒಂದೆಳೆ ಪಾಕ ಮಾಡಿ ಇಳಿಸಿ. ಉಳಿದ ಎಲ್ಲಾ ಹುರಿದ ಸಾಮಗ್ರಿ ಮತ್ತು ಅಂಟು ಪಾಕದಲ್ಲಿ ಸೇರಿಸಿ ಚೆನ್ನಾಗಿ ಬೆರೆಸಿ ಒಂದೊಂದೇ ಉಂಡೆ ಮಾಡಿರಿ. ಮೆಂತ್ಯ ಲಾಡು ಈಗ ತಯಾರಾದವು. ಚಳಿಗಾಲದಲ್ಲಿ ಆರೋಗ್ಯಕ್ಕಾಗಿ ಮೆಂತ್ಯ ಲಾಡು ಮಾಡುತ್ತಾರೆ.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *