ಹನಿಗವನಗಳು

– ವೆಂಕಟೇಶ ಚಾಗಿ

*** ಬದುಕು ***

ಸಾವಿರ ಸಮಸ್ಯೆಗಳಿದ್ದರೂ
ದೈರ‍್ಯದಿಂದ ಇರಬೇಕು
ಈ ಜೀವನದಲ್ಲಿ
ಈ ಬದುಕು ಅನಿವಾರ‍್ಯವಲ್ಲ
ಬಯಸದೇ ಬಂದ ಬಾಗ್ಯವಿದು
ಗೆದ್ದು ಬದುಕು ಈ ಲೋಕದಲ್ಲಿ

 

*** ಆಸ್ಪತ್ರೆ ***

ಆಸ್ಪತ್ರೆಯಲ್ಲಿ
ಅನಸ್ತೇಶಿಯಾ ಬೇಕಿಲ್ಲ
ಆಪರೇಶನ್ ಮಾಡಲು
ಕೊಟ್ಟರಾಯಿತು
ರೋಗಿಯ ಕೈಯಿಗೆ
ಡಾಟಾ ಇರುವ ಮೊಬೈಲು

 

*** ಮದುವೆ ***

ಮೊಬೈಲ್ ನಲ್ಲೇ
ಹುಚ್ಚನಂತೆ ಪ್ರೀತಿಸಿ ಅವನು
ಅವಳನ್ನು ಮದುವೆಯಾದ
ಇವನು..?
ಮದುವೆಯಾಗಿ ಹುಚ್ಚನಾದ

 

*** ಶಾಯರಿ ***

ಬರಹದ ಜೊತೆ ಬಂಗಾರಿ
ಕೊಟ್ಟಿರುವಳು ಮೆಟ್ರಿ
ಜೊತೆಗೊಂದು ಸವಾಲು
ನೋಡಿದಾಗ ಮನ ಅರಳಲು
ಸುಂದರ ಪ್ಯಾಕಿನೊಳಗೆ
ಬಂದಂದೆ ಮಾಲು.

(ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *