ಮನೆಯಲ್ಲೇ ಮಾಡಿ ಸಿಹಿಯಾದ ಕೊಬ್ಬರಿ ಹಲ್ವಾ
– ಸವಿತಾ.

ಏನೇನು ಬೇಕು
ತೆಂಗಿನ ಕಾಯಿ – 1
ಅಕ್ಕಿ – 2 ಚಮಚ
ಬೆಲ್ಲ – 3/4 (ಮುಕ್ಕಾಲು) ಲೋಟ
ತುಪ್ಪ – 4 ಚಮಚ
ಏಲಕ್ಕಿ – 2
ಮಾಡುವ ಬಗೆ
ಅಕ್ಕಿಯನ್ನು 6 ಗಂಟೆಗಳ ಕಾಲ ನೆನೆ ಹಾಕಿಡಿ. ತೆಂಗಿನ ಕಾಯಿ ತುರಿದು ಇಟ್ಟುಕೊಳ್ಳಿ. ತೆಂಗಿನ ತುರಿ ಮತ್ತು ನೆನೆಸಿದ ಅಕ್ಕಿ ಸೇರಿಸಿ, ನಂತರ ಅರ‍್ದ ಲೋಟ ನೀರು ಹಾಕಿ ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿ ತೆಗೆಯಿರಿ.
ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಲು ಇಟ್ಟು, ರುಬ್ಬಿದ ಮಿಶ್ರಣ ಸುರಿಯಿರಿ. ಬೆಲ್ಲ ಹಾಕಿ ಗಟ್ಟಿ ಆಗುವ ವರೆಗೆ ತಿರುಗಿಸುತ್ತಾ ಇರಬೇಕು. ಗಟ್ಟಿ ಆದ ಮೇಲೆ ಒಲೆ ಆರಿಸಿ. ಏಲಕ್ಕಿ ಕುಟ್ಟಿ ಪುಡಿ ಮಾಡಿ ಹಾಕಿ. ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿ, ಕುದಿಸಿದ ಮಿಶ್ರಣ ಸುರಿದು, ಸಮತಟ್ಟಾಗಿ ತಟ್ಟಿ ಆರಲು ಬಿಡಿ. ನಂತರ ಬೇಕಾದ ಆಕಾರ ಕೊಟ್ಟು ಕತ್ತರಿಸಿ ಇಟ್ಟುಕೊಳ್ಳಿ. ಈಗ ಕೊಬ್ಬರಿ ಹಲ್ವಾ ತಯಾರಾಯಿತು. ಸರಳ ಪೌಶ್ಟಿಕ ಕೊಬ್ಬರಿ ಹಲ್ವಾ ಮಾಡಿ ಸವಿಯಿರಿ.

ಇತ್ತೀಚಿನ ಅನಿಸಿಕೆಗಳು