ರಾಗಿ ಲಾಡು
– ಸವಿತಾ.
ಏನೇನು ಬೇಕು?
ರಾಗಿ ಹಿಟ್ಟು – 1-1/2 ( ಒಂದೂವರೆ ಲೋಟ )
ತುಪ್ಪ – 2 ಚಮಚ
ಎಳ್ಳು – 1/2ಲೋಟ
ಒಣಕೊಬ್ಬರಿ – 1/2 ಲೋಟ
ಪುಟಾಣಿ (ಹುರಿಗಡಲೆ) – 1/2 ಲೋಟ
ಬಾದಾಮಿ – 1 ಚಮಚ
ಗೋಡಂಬಿ – 1 ಚಮಚ
ಕುಂಬಳಕಾಯಿ ಬೀಜ – 1 ಚಮಚ
ಏಲಕ್ಕಿ – 3
ಒಣ ದ್ರಾಕ್ಶಿ – 1 ಚಮಚ
ಬೆಲ್ಲ – 1 ಲೋಟ
ಮಾಡುವ ಬಗೆ
ಒಣಕೊಬ್ಬರಿ ತುರಿದು ಇಟ್ಟುಕೊಳ್ಳಿ. ತವೆ ಬಿಸಿ ಮಾಡಿ, ಸ್ವಲ್ಪ ಎಳ್ಳು ಹುರಿದು ತೆಗೆದು ನಂತರ ಒಣಕೊಬ್ಬರಿ ಮತ್ತು ಹುರಿಗಡಲೆ (ಪುಟಾಣಿ) ಒಂದಾದ ಮೇಲೊಂದರಂತೆ ಹಾಕಿ ಸ್ವಲ್ಪ ಬಿಸಿ ಮಾಡಿ ತೆಗೆದು ಇಡಿರಿ. ಹೀಗೆ ಬಾದಾಮಿ, ಗೋಡಂಬಿ, ಏಲಕ್ಕಿ ಮತ್ತು ಒಣ ದ್ರಾಕ್ಶಿ, ಕುಂಬಳಕಾಯಿ ಬೀಜ ಸ್ವಲ್ಪ ಬಿಸಿ ಮಾಡಿ ತೆಗೆಯಿರಿ.
ಬೆಲ್ಲಕ್ಕೆ ಕಾಲು ಲೋಟ ನೀರು ಸೇರಿಸಿ ಬಿಸಿ ಮಾಡಿ ಬೆಲ್ಲ ಕರಗಿಸಿ (ಪಾಕ ಬೇಕಿಲ್ಲ). ರಾಗಿ ಹಿಟ್ಟಿಗೆ ತುಪ್ಪ ಹಾಕಿ ಹುರಿದು ತೆಗೆಯಿರಿ. ಹುರಿದ ಹಿಟ್ಟು, ಪುಡಿ ಮಾಡಿದ ಒಣಕೊಬ್ಬರಿ, ಎಳ್ಳು ಮಿಶ್ರಣ ಮತ್ತು ಕರಗಿಸಿದ ಬೆಲ್ಲದ ನೀರು ಎಲ್ಲ ಸೇರಿಸಿ ಚೆನ್ನಾಗಿ ಕಲಸಿ. ಸ್ವಲ್ಪ ಆರಿದ ಮೇಲೆ ಉಂಡೆ ಕಟ್ಟಿ ಇಟ್ಟುಕೊಳ್ಳಿ.
ಈಗ ಪ್ರೊಟೀನ್ ಇರುವ ಆರೋಗ್ಯಕರ ರಾಗಿ ಲಾಡು ಸವಿಯಲು ತಯಾರು 🙂


ಇತ್ತೀಚಿನ ಅನಿಸಿಕೆಗಳು