ಕೋಡುಬಳೆ

ಸವಿತಾ.

kodubale, ಕೋಡುಬಳೆಏನೇನು ಬೇಕು?

ಅಕ್ಕಿ ಹಿಟ್ಟು —- 2 ಲೋಟ
ಗೋದಿ ಹಿಟ್ಟು —- 3/4 (ಮುಕ್ಕಾಲು) ಲೋಟ
ನೀರು —- 3 ಲೋಟ
ಎಣ್ಣೆ —- 2 ಚಮಚ
ಉಪ್ಪು —- 1/2 ಚಮಚ
ಒಣ ಕಾರ —- 1/2 ಚಮಚ
ಅರಿಶಿನ —- ಸ್ವಲ್ಪ
ಜೀರಿಗೆ — 1/4 ಚಮಚ
ಅಜೀವಾಯಿನ್ (ಓಂ ಕಾಳು) —- 1/4 ಚಮಚ
ಬಿಳಿ ಎಳ್ಳು —- 1/4 ಚಮಚ

ಮಾಡುವ ಬಗೆ:

ಮೂರು ಲೋಟ ನೀರು ಕುದಿಯಲು ಇಟ್ಟು ಸ್ವಲ್ಪ ಅರಿಶಿನ ಮತ್ತು ಉಪ್ಪು, ನಿಮ್ಮ ರುಚಿಗೆ ತಕ್ಕಶ್ಟು ಒಣ ಕಾರ ಹಾಕಿ. ಎಣ್ಣೆ ಸ್ವಲ್ಪ ಹಾಕಿ. ನೀರು ಬಿಸಿಯಾದ ಮೇಲೆ ಅಕ್ಕಿ ಹಿಟ್ಟು ಗೋದಿ ಹಿಟ್ಟು ಹಾಕಿ ಚಮಚದಿಂದ ತಿರುಗಿಸಿ ಒಲೆ ಆರಿಸಿ ಬಿಡಿ. ಇದಕ್ಕೆ ಜೀರಿಗೆ, ಅಜೀವಾಯಿನ್, ಎಳ್ಳು ಹಾಕಿ ಚೆನ್ನಾಗಿ ಕಲಸಿ ಕೋಡುಬಳೆ ಆಕಾರ ಕೊಟ್ಟು ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಈಗ ಕೋಡುಬಳೆ ತಯಾರಾಯಿತು. ತಯಾರಿಸಿ ಇಟ್ಟುಕೊಂಡೂ ತಿನ್ನಬಹುದು. ಚಹಾ ಜೊತೆ ಸವಿಯಲೂ ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *