ನಾ ನೋಡಿದ ಸಿನೆಮಾ: ಮರ‍್ಪಿ

– ಕಿಶೋರ್ ಕುಮಾರ್.

ಕನ್ನಡ ಸಿನಿಮಾರಂಗದಲ್ಲಿ ಇತ್ತೀಚಿಗೆ ಹೊಸತನದ ಅಲೆ ಎದ್ದಿದೆ ಅಂದರೆ ತಪ್ಪಾಗಲಾರದು. ಎತ್ತುಗೆಗೆ ಇದೇ ವರುಶ ಬಿಡುಗಡೆಯಾದ ಬ್ಲಿಂಕ್. ತುಸು ಇದೆ ಸಾಲಿಗೆ ಸೇರುವ ಮತ್ತೊಂದು ಸಿನೆಮಾ ಮರ‍್ಪಿ.

ಈ ದಶಕ (2024) ಹಾಗೂ 90 ರ ದಶಕದಲ್ಲಿರುವವರ ನಡುವೆ ರೇಡಿಯೋ ಮೂಲಕ ಏರ‍್ಪಡುವ ಸಂವಹನದ ಸುತ್ತ ಕತೆ ತಿರುಗುತ್ತದೆ. ಇದರಿಂದ ಸುಮಾರು 3 ದಶಕಗಳ ಅಂತರದಲ್ಲಿ ಬದುಕುತ್ತಿರುವವರ ಬದುಕು ಹೇಗೆ ನಂಟನ್ನು ಹೊಂದಿರುತ್ತದೇ ಮತ್ತು ಮುಂದೆ ಏನಾಗುವುದು ಎನ್ನುವುದೇ ಕತೆ.

ಮುಕ್ಯ ಪಾತ್ರದಲ್ಲಿ ಪ್ರಬು ಮುಂದಕುರ್, ರೋಶಿನಿ ಪ್ರಕಾಶ್, ಸಹ ನಟರಾಗಿ ದತ್ತಣ್ಣ, ಇಳಾ ವೀರಮಲ್ಲ ಹಾಗೂ ಇತರರು ನಟಿಸಿದ್ದಾರೆ. ದತ್ತಣ್ಣ ಅವರು ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು, ಇನ್ನುಳಿದಂತೆ ರೋಶಿನಿ ಪ್ರಕಾಶ್ ಅವರ ಪಾತ್ರ ಚೆನ್ನಾಗಿ ಮೂಡಿ ಬಂದಿದೆ.

ಬಿ ಎಸ್ ಪಿ ವರ‍್ಮಾ ಅವರ ಕತೆ ಹಾಗೂ ನಿರ‍್ದೇಶನ ಈ ಚಿತ್ರಕ್ಕಿದ್ದು, ರಾಮ್ಕೋ ವರ‍್ಮಾ ಹಾಗೂ ಬಿ ಎಸ್ ಪಿ ವರ‍್ಮಾ ಅವರು ಈ ಸಿನೆಮಾವನ್ನು ನಿರ‍್ಮಿಸಿದ್ದಾರೆ. ಆದರ‍್ಶ್ ಆರ್ ಅವರ ಸಿನೆಮಾಟೋಗ್ರಪಿ ಚಿತ್ರಕ್ಕೆ ಹೆಚ್ಚಿನ ತೂಕ ನೀಡಿದೆ.

ಕತೆಯಲ್ಲಿ ಹೊಸತನವಿದ್ದರೂ, ಕೆಲವೇ ಪಾತ್ರಗಳ ನಡುವೆ ನಡೆಯುವ ಕತೆಯಾದ್ದರಿಂದ ನೋಡುಗನನ್ನು ಹೆಚ್ಚಿನ ಹೊತ್ತು ಹಿಡಿದಿಡುವಂತಹ ಇನ್ನೂ ಕೆಲವು ಆಂಶಗಳು ಬೇಕಿತ್ತು ಎಂದೆನಿಸುತ್ತದೆ. 18 ಆಕ್ಟೊಬ‍ರ್ 2024 ರಂದು ಬಿಡುಗಡೆಯಾದ ಈ ಸಿನೆಮಾ ಈಗ ಅಮೆಜಾನ್ ಪ್ರೈಮ್ ನಲ್ಲೂ ಸಹ ಲಬ್ಯವಿದೆ. ಮನೆಮಂದಿಯೆಲ್ಲಾ ಕೂತು ಒಮ್ಮೆ ನೋಡಬಹುದಾದ ಈ ಸಿನೆಮಾ ನೋಡುಗರಿಗೆ ಒಂದು ಹೊಸ ಅನುಬವವನ್ನು ನೀಡುತ್ತದೆ.

(ಚಿತ್ರ ಸೆಲೆ: in.bookmyshow.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *