ಚಿದುಕಿದ ಅವರೆ ಬೇಳೆ ಸಾರು

– ಕಿಶೋರ್ ಕುಮಾರ್.

ಏನೇನು ಬೇಕು

ಬಿಡಿಸಿದ ಅವರೆಕಾಳು – ¼ ಕೆ.ಜಿ
ಈರುಳ್ಳಿ – 2
ಟೊಮೆಟೊ – 1
ಶುಂಟಿ – ಸಣ್ಣ ಚೂರು
ಕೊತ್ತಂಬರಿಸೊಪ್ಪು – ಸ್ವಲ್ಪ
ಬೆಳ್ಳುಳ್ಳಿ – 2 ಎಸಳು
ಚಕ್ಕೆ – ಸಣ್ಣ ಚೂರು
ಲವಂಗ – 2
ಕಾಯಿ – 2 ಚೂರು
ಕೊತ್ತಂಬರಿ (ದನಿಯಾ) ಪುಡಿ – 2
ಮೆಣಸಿನಕಾಯಿ ಪುಡಿ – 2
ಆಶಿರಿಣದ ಪುಡಿ – 1
ಆಲೂಗೆಡ್ಡೆ – 1
ಬದನೆಕಾಯಿ – 1

ಮಾಡುವ ಬಗೆ

ಅವರೆಕಾಳನ್ನು 10 ಗಂಟೆ ನೆನೆಸಿ, ನಂತರ ಸಿಪ್ಪೆ ತೆಗೆದು ಇಟ್ಟುಕೊಳ್ಳಿ. ಒಂದು ಬಾಣೆಲೆಗೆ ಸ್ವಲ್ಪ ಅಡುಗೆ ಎಣ್ಣೆ, ಕಾದ ಎಣ್ಣೆಗೆ ಕತ್ತರಿಸಿದ 1 ಈರುಳ್ಳಿ ಹಾಗೂ ಟೊಮೆಟೊ ಹಾಕಿ ಹುರಿದುಕೊಳ್ಳಿ. ನಂತರ ಇದನ್ನು ಒಂದು ಪುಟ್ಟ ಜಾರ್ ಗೆ ಹಾಕಿ, ಕೊತ್ತಂಬರಿ ಪುಡಿ, ಮೆಣಸಿನಕಾಯಿ ಪುಡಿ, ಅರಿಶಿಣದ ಪುಡಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಒಂದು ಪಾತ್ರೆಗೆ ಅಡುಗೆ ಎಣ್ಣೆ ಹಾಕಿ, ಕಾದ ಎಣ್ಣೆಗೆ 1 ಕತ್ತರಿಸಿದ ಈರುಳ್ಳಿ ಹಾಕಿ ಹುರಿದು, ನಂತರ ಹಿಚುಕಿದ ಅವರೆ ಬೇಳೆ ಸೇರಿಸಿ ಹುರಿಯಿರಿ. ನಂತರ ರುಬ್ಬಿಕೊಂಡ ಮಸಾಲೆ ಸೇರಿಸಿ, ಸಣ್ಣ ಉರಿಯಲ್ಲಿ ಬೇಯಿಸಿ. ಇದಕ್ಕೆ ಕತ್ತರಿಸಿದ ಆಲೂಗೆಡ್ಡೆ, ಬದನೆಕಾಯಿ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಬೇಯಿಸಿ.

ಒಂದು ಸಣ್ಣ ಜಾ‍ರ್ ಗೆ ಕಾಯಿ, ಶುಂಟಿ, ಕೊತ್ತಂಬರಿ ಸೊಪ್ಪು, ಚಕ್ಕೆ, ಲವಂಗ, ಬೆಳ್ಳುಳ್ಳಿ ಹಾಕಿ ರುಬ್ಬಿಕೊಂಡು, ಇದನ್ನು ಬೇಳೆ ಹಾಗೂ ಆಲೂಗೆಡ್ಡೆ ಬೆಂದಮೇಲೆ ಸೇರಿಸಿ. ಈಗ ರುಚಿಕರವಾದ ಚಿದುಕಿದ/ಹಿಚುಕಿದ ಅವರೆ ಬೇಳೆ ಸಾರು ರೆಡಿ. ಇಡ್ಲಿ ಇಲ್ಲವೇ ಬಿಳಿ ಅನ್ನದ ಜೊತೆ ಸವಿಯಲು ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *