ಕಿರುಬರಹ: ಎಲ್ಲ ಬಲ್ಲವರಿಲ್ಲ

– .

ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ|
ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ|
ವೆಲ್ಲವರಿಗಿಲ್ಲ ಸರ್ವಜ್ಞ||

‘ತುಂಬಿದ ಕೊಡ ತುಳುಕುವುದಿಲ್ಲ, ಎಂದಿಗೂ ಅರ‍್ದ ತುಂಬಿದ ಕೊಡ ಹೆಚ್ಚು ಸದ್ದು ಮಾಡುತ್ತದೆ’. ಮನುಶ್ಯ ಕೆಲವೊಮ್ಮೆ ಸ್ವಲ್ಪವೇ ತಿಳಿದಿದ್ದರು ನನಗೆಲ್ಲ ತಿಳಿದಿದೆ ಎಂಬ ಅಹಂಕಾರ ಪ್ರದರ‍್ಶಿಸುತ್ತಾನೆ; ಹಾಗೆಯೇ ಎಲ್ಲ ತಿಳಿದವರು ಮೌನವಾಗಿರುತ್ತಾರೆ ಎಂಬ ಮಾತಿಗೆ ಸರ‍್ವಜ್ನರ ತ್ರಿಪದಿಯ ಈ ಸಾಲುಗಳು ಹೆಚ್ಚು ಪುಶ್ಟಿ ನೀಡುತ್ತದೆ. ಇದರಿಂದ ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳ ಇಲ್ಲ ಎಂಬ ಅಂಶ ಸ್ಪಶ್ಟೀಕರಿಸುತ್ತದೆ. ಇನ್ನೂ ಮುಂದುವರಿದು ಎಲ್ಲ ತಿಳುವಳಿಕೆ, ಜ್ನಾನವಿದ್ದರೂ ಅವರ ಜ್ನಾನ, ಪಾಂಡಿತ್ಯ ಯಾರಿಗೂ ಉಪಯೋಗಕ್ಕೆ ಬಾರದೆ ಅವರೊಡನೆ ಕ್ಶಯಗೊಂಡು ಅವಸಾನಗೊಳ್ಳುತ್ತದೆ. ಜ್ನಾನವಿದ್ದಲ್ಲಿ; ಅಗತ್ಯವಿದ್ದವರಿಗೆ, ಅಜ್ನಾನದಿಂದ ಬಳಲುತ್ತಿರುವವರಿಗೆ, ಕಡುಕಶ್ಟದಲ್ಲಿ ಬೇಯುತ್ತಿರುವವರಿಗೆ ಹಂಚಿ ಉಪಕಾರಿಗಳಾಗಬೇಕು. ಆದರೆ ಕೆಲವರು ತಮ್ಮಲ್ಲಿನ ಸ್ವಾರ‍್ತ, ಲೋಬ, ಅಹಂಕಾರಗಳಿಂದಾಗಿ ಅವರೊಳಗಿನ ಜ್ನಾನವನ್ನು ಯಾರಿಗೂ ಹಂಚದೆ ವ್ಯರ‍್ತಗೊಳಿಸುತ್ತಾರೆ. ಇಂತಹವರ ಬಳಿ ಜ್ನಾನವಿದ್ದೂ ಉಪಯೋಗವಿಲ್ಲ. ಈ ಸಾಹಿತ್ಯವೆನ್ನುವುದು ಕೂಡ ಅಶ್ಟೆ, ಎಲ್ಲರ ಅಬಿರುಚಿಯಾಗಿರಲು ಸಾದ್ಯವಿಲ್ಲ! ಸಾಹಿತ್ಯ ಓದುವ, ಬರೆಯುವ ಅಬಿರುಚಿ ಕೆಲವೇ ಕಎಲವು ಆಸಕ್ತರಿಗಿರುತ್ತದೆ. ಅಂತಹವರನ್ನು ಮಾತ್ರ ಕೈಬೀಸಿ ಕರೆದು ತನ್ನ ಬಾಹುಗಳಲ್ಲಿ ಬಂದಿಸಿಕೊಳ್ಳುತ್ತದೆ.

( ಚಿತ್ರಸೆಲೆ: wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *