ಹುಣಸೆ ಹಣ್ಣಿನ ಸಿಹಿ-ಕಾರದ ಚಟ್ನಿ
– ಸವಿತಾ.
ಬೇಕಾಗುವ ಸಾಮಾನುಗಳು
ಹುಣಸೆ ಹಣ್ಣು – 1 ಬಟ್ಟಲು
ಬೆಲ್ಲ – 1 ಬಟ್ಟಲು
ಕರ್ಜೂರ – 1 ಬಟ್ಟಲು
ಎಣ್ಣೆ – 1 ಚಮಚ
ಒಣ ಶುಂಟಿ ಪುಡಿ – 1/2 ಚಮಚ
ದನಿಯಾ ಪುಡಿ – 1/2 ಚಮಚ
ಸೋಂಪು ಕಾಳು ಪುಡಿ -1/2 ಚಮಚ
ಜೀರಿಗೆ ಪುಡಿ – 1/2 ಚಮಚ
ಕರಿ ಮೆಣಸಿನ ಪುಡಿ – 1/4 ಚಮಚ
ಒಣ ಕಾರದ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಶ್ಟು
ಮಾಡುವ ಬಗೆ
ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ತೆಗೆಯಿರಿ. ಕರ್ಜೂರ ಕೂಡ ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ತೆಗೆಯಿರಿ. ಹುಣಸೆ ಬೀಜ ಮತ್ತು ನಾರು ಆರಿಸಿ ತೆಗೆದು ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿ ನಂತರ ಸೋಸಿ ಇಟ್ಟುಕೊಳ್ಳಿ. ನಂತರ ಕರ್ಜೂರ ರುಬ್ಬಿ ಇಟ್ಟುಕೊಳ್ಳಿ.
ಒಂದು ಬಾಣಲೆ ಇಟ್ಟು ಬಿಸಿ ಮಾಡಿ, ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಒಂದು ಲೋಟ ನೀರು ಹಾಕಿ. ರುಬ್ಬಿದ ಹುಣಸೆ ಹಣ್ಣು ಮತ್ತು ಕರ್ಜೂರ ಹಾಕಿ, ಉಪ್ಪು, ಒಣ ಕಾರದ ಪುಡಿ ಹಾಕಿ ಕುದಿಸಿ. ದನಿಯಾ, ಕರಿಮೆಣಸಿನ ಕಾಳು, ಜೀರಿಗೆ, ಸೋಂಪು ಕಾಳು ಸ್ವಲ್ಪ ಹುರಿದು ತೆಗೆದು ನಂತರ ಪುಡಿ ಮಾಡಿ ಸೇರಿಸಿ ಕುದಿಯಲು ಬಿಡಿ. ಒಣ ಶುಂಟಿ ಹಾಕಿ ಚೆನ್ನಾಗಿ ಕುದಿಸಿ ಕೊನೆಗೆ ಬೆಲ್ಲ ಹಾಕಿ ಸ್ವಲ್ಪ ಕುದಿಸಿ ಇಳಿಸಿ.
ತಯಾರಾದ ಕಟ್ಟಾ ಮೀಟಾ [ಸಿಹಿ ಕಾರದ] ಹುಣಸೆ ಹಣ್ಣಿನ ಚಟ್ನಿ ಚಾಟ್ಸ್ ಅತವಾ ನಿಮ್ಮ ಇಶ್ಟದ ತಿಂಡಿ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು