ಕವಿತೆ: ನಂಬಿಕೆ ನೀಡುವೆಯಾ
ನೋಡೊಮ್ಮೆ ಓ ನಲ್ಲೇ
ನಿಂತಿಹೆನು ನಾ ನಿಲ್ಲೆ
ಬಳಿ ಬಂದು ಕರೆದೊಯ್ವೆಯಾ
ನಗುವಾಗ ಚಂದ್ರಿಕೆ ನೀನು
ನಿಂತಾಗ ಹೂ ಬಳ್ಳಿ ನೀನು
ಸನಿಹ ಬಂದು ಇರಲಾರೆಯಾ
ಮನತುಂಬಿತು ನಿನ್ನ ನಗುವಿಂದ
ನಿನ್ನ ನಗು ತಂದಿದೆ ಆನಂದ
ಆ ನಗುವ ನನಗೂ ತಾರೆಯಾ
ಮಿನುಗುವ ಚುಕ್ಕಿ ನೀನು
ಬರುವೆನು ನಾ ದಾಟಿ ಆ ಬಾನು
ನೀ ಸಿಗುವೆನೆಂಬ ನಂಬಿಕೆ ನೀಡುವೆಯಾ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು