ಸೌತೆಕಾಯಿ ಹಸಿ ಗೊಜ್ಜು
ಏನೇನು ಬೇಕು
• ಸೌತೆಕಾಯಿ – 1
• ಹುರಿಗಡಲೆ – 100 ಗ್ರಾಂ
• ತೆಂಗಿನಕಾಯಿ – 100 ಗ್ರಾಂ
• ಹಸಿ ಮೆಣಸಿನಕಾಯಿ – 6 ರಿಂದ 7
• ಜೀರಿಗೆ – 1 ಚಮಚ
• ಮೆಂತ್ಯೆ ಕಾಳು – 1 ಚಮಚ
• ಸಾಸಿವೆ – 1 ಚಮಚ
• ಉದ್ದಿನ ಬೇಳೆ – 1 ಚಮಚ
• ಇಂಗು – ರುಚಿಗೆ ತಕ್ಕಶ್ಟು
• ಉಪ್ಪು – ರುಚಿಗೆ ತಕ್ಕಶ್ಟು
• ಒಗ್ಗರಣೆಗೆ ಎಣ್ಣೆ
• ಕರಿಬೇವು – ಸ್ವಲ್ಪ
• ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ಬಗೆ
ಒಂದು ಬಾಣಲೆಯನ್ನು ತೆಗೆದುಕೊಂಡು, ಅದಕ್ಕೆ ಹುರಿಗಡಲೆ, ಹಸಿ ಮೆಣಸಿನಕಾಯಿ ಮತ್ತು ಜೀರಿಗೆ ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಹುರಿಯಿರಿ. ಹುರಿಯುವಾಗ ಉರಿ ಕಡಿಮೆ ಇರಲಿ, ಇಲ್ಲದಿದ್ದರೆ ಸೀದುಹೋಗುವ ಸಾದ್ಯತೆ ಇರುತ್ತದೆ. ನಂತರ ಹುರಿದ ಮಿಶ್ರಣವನ್ನು ತೆಂಗಿನಕಾಯಿಯೊಂದಿಗೆ ಮಿಕ್ಸರ್ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ಬಟ್ಟಲು ತೆಗೆದುಕೊಂಡು ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹೆಚ್ಚಿದ ಸೌತೆಕಾಯಿಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಒಗ್ಗರಣೆಗಾಗಿ ಒಂದು ಸಣ್ಣ ಬಾಣಲೆಯನ್ನು ತೆಗೆದುಕೊಂಡು, ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು, ಉದ್ದಿನ ಬೇಳೆ, ಮೆಂತ್ಯೆ ಕಾಳು ಮತ್ತು ಒಂದು ಚಿಟಿಕೆ ಇಂಗು ಹಾಕಿ ಒಗ್ಗರಣೆ ತಯಾರಿಸಿ. ಈ ಒಗ್ಗರಣೆಯನ್ನು ಸೌತೆಕಾಯಿ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿ, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ , ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು