ಅಕ್ಕಿ ನುಚ್ಚಿನ ಉಪ್ಪಿಟ್ಟು

– ಕಿಶೋರ್ ಕುಮಾರ್.

ಏನೇನು ಬೇಕು

  • ಅಕ್ಕಿ ನುಚ್ಚು – 2 ಲೋಟ
  • ಈರುಳ್ಳಿ – 4
  • ಕಡಲೇಬೇಳೆ – ಸ್ವಲ್ಪ
  • ಟೊಮೆಟೊ – 2
  • ಸಾಸಿವೆ – ಸ್ವಲ್ಪ
  • ಅಡುಗೆ ಎಣ್ಣೆ – ಬೇಕಾದಶ್ಟು
  • ಹಸಿಮೆಣಸಿನಕಾಯಿ – 4
  • ಕರಿಬೇವು – ಸ್ವಲ್ಪ
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು
  • ತೆಂಗಿನಕಾಯಿ ತುರಿ – ಬೇಕಿದ್ದರೆ

ಮಾಡುವ ಬಗೆ

ಅಕ್ಕಿಯನ್ನು ನೀರಿನಲ್ಲಿ ತೊಳೆದು ಒಣಗಿಸಿ, ರವೆಯಂತೆ ನುಚ್ಚು ಮಾಡಿಸಿಕೊಳ್ಳಬೇಕು. ಒಂದು ಬಾಣಲೆಗೆ ಅಕ್ಕಿ ನುಚ್ಚನ್ನು ಹಾಕಿ ಕೆಂಪಾಗುವಂತೆ ಹುರಿದು, ತೆಗೆದಿಡಿ. ಈಗ ಬಾಣೆಲೆಗೆ ಅಡುಗೆ ಎಣ್ಣೆ ಹಾಕಿ, ಕಾದ ಎಣ್ಣೆಗೆ ಸಾಸಿವೆ, ಕಡಲೆಬೇಳೆ, ಹಸಿಮೆಣಸಿನಕಾಯಿ, ಈರುಳ್ಳಿ, ಕರಿಬೇವು ಹಾಕಿ ಈರುಳ್ಳಿಯ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಹುರಿಯಿರಿ, ನಂತರ ಇದಕ್ಕೆ ಟೊಮೆಟೊ ಸೇರಿಸಿ ಹುರಿಯಿರಿ. ಇದಕ್ಕೆ 6 ಲೋಟ ನೀರನ್ನು ಸೇರಿಸಿ, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಕುದಿಸಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ. ನಂತರ ಹುರಿದಿಟ್ಟುಕೊಂಡಿದ್ದ ಅಕ್ಕಿ ನುಚ್ಚನ್ನು ಸೇರಿಸಿ, ಗಂಟು ಬಾರದಂತೆ ಒಂದು ಹದ ಬರುವವರೆಗೂ ತಿರುಗಿಸಿ. ಈಗ ಅಕ್ಕಿ ನುಚ್ಚಿನ ಉಪ್ಪಿಟ್ಟು ರೆಡಿ. ಇದಕ್ಕೆ ತೆಂಗಿನಕಾಯಿ ತುರಿ ಸೇರಿಸಿದರೆ, ಸವಿಯಲು ಇನ್ನೂ ಚೆನ್ನ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks