ಮೇತಿ ಮಟ್ರಿ

– ಸವಿತಾ.

ಏನೇನು ಬೇಕು

  • ಗೋದಿ ಹಿಟ್ಟು – 1 ಬಟ್ಟಲು
  • ಕಡಲೆ ಹಿಟ್ಟು – 1/2 ಬಟ್ಟಲು
  • ಉಪ್ಪು ರುಚಿಗೆ ತಕ್ಕಶ್ಟು
  • ಒಣ ಕಾರದ ಪುಡಿ – 1/2 ಚಮಚ
  • ಜೀರಿಗೆ – 1/2 ಚಮಚ
  • ಅಜೀವಾಯಿನ್ ಅತವಾ ಓಂ ಕಾಳು – 1/4 ಚಮಚ
  • ಮೆಂತೆ ಸೊಪ್ಪು – 1 ಬಟ್ಟಲು
  • ಕರಿಬೇವು ಸ್ವಲ್ಪ
  • ಕೊತ್ತಂಬರಿ ಸ್ವಲ್ಪ
  • ಅಡುಗೆ ಎಣ್ಣೆ

ಮಾಡುವ ಬಗೆ

ಮೆಂತೆ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವನ್ನು ತೊಳೆದು ಬಿಡಿಸಿ ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಗೋದಿ ಹಿಟ್ಟನ್ನು ಕಡಲೆ ಹಿಟ್ಟಿಗೆ ಹಾಕಿ ಬೆರೆಸಿ. ಉಪ್ಪು, ಒಣ ಕಾರದ ಪುಡಿ, ಜೀರಿಗೆ ಮತ್ತು ಅಜೀವಾಯಿನ್ ಇಲ್ಲವೇ ಓಂ ಕಾಳನ್ನು ಸ್ವಲ್ಪ ಪುಡಿ ಮಾಡಿ ಸೇರಿಸಿ.

ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿ. 3 ಚಮಚ ಅಡುಗೆ ಎಣ್ಣೆ ಸೇರಿಸಿ ಇನ್ನೊಮ್ಮೆ ಚೆನ್ನಾಗಿ ನಾದಿ. ಉಂಡೆ ಮಾಡಿ ಚಪಾತಿ ಲಟ್ಟಿಸಿ. ನಂತರ ಸಣ್ಣ ಪುರಿ ತರಹ ಬಟ್ಟಲಿನಿಂದ ಕತ್ತರಿಸಿ. ಪೋರ‍್ಕ್ ಚಮಚ ದಿಂದ ಸಣ್ಣ, ಸಣ್ಣ ತೂತುಗಳನ್ನು ಮಾಡಿ, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಇದು ಇಟ್ಟು ತಿನ್ನುವ ಕುರುಕಲು ತಿನಿಸಾಗಿದ್ದು, ಟೀ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *