ಮೊಟ್ಟೆ ಕಬಾಬ್
ಏನೇನು ಬೇಕು
- ಮೊಟ್ಟೆ – 1
- ಬೇಯಿಸಿದ ಮೊಟ್ಟೆ – 4
- ಉಪ್ಪು – 1 ಚಮಚ
- ಕರಿಮೆಣಸಿನಪುಡಿ – ½ ಚಮಚ
- ಗರಂ ಮಸಾಲ – 1 ಚಮಚ
- ಶುಂಟಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಒಣಮೆಣಸಿನಕಾಯಿ ಪುಡಿ – 1 ಚಮಚ
- ಜೋಳದ ಹಿಟ್ಟು – 1 ಚಮಚ
- ಕಡಲೆ ಹಿಟ್ಟು – 1 ಚಮಚ
- ಅಕ್ಕಿ ಹಿಟ್ಟು – 1 ಚಮಚ
- ಕಬಾಬ್ ಮಸಾಲ ಪುಡಿ – 2 ಚಮಚ
- ಅಡುಗೆ ಎಣ್ಣೆ – ಸ್ವಲ್ಪ
- ಜಜ್ಜಿದ ಶುಂಟಿ – 1 ಚಮಚ
- ಕರಿಬೇವಿನ ಎಲೆ – 10
ಮಾಡುವ ಬಗೆ
ಒಂದು ಪಾತ್ರೆಗೆ ಒಂದು ಮೊಟ್ಟೆಯನ್ನು ಒಡೆದು ಹಾಕಿ ಅದಕ್ಕೆ ಉಪ್ಪು, ಕರಿಮೆಣಸಿನಪುಡಿ, ಶುಂಟಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಒಣಮೆಣಸಿನಕಾಯಿ ಪುಡಿ, ಜೋಳದ ಹಿಟ್ಟು, ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಮತ್ತು ಕಬಾಬ್ ಮಸಾಲ ಪುಡಿ ಹಾಕಿ ಚೆನ್ನಾಗಿ ಕಲಸಿ 15 ನಿಮಿಶ ಬಿಡಿ.
ಬೇಯಿಸಿದ ಮೊಟ್ಟೆ ಸಿಪ್ಪೆ ತೆಗೆದು, 2 ಹೋಳಾಗಿ ಕತ್ತರಿಸಿ. ಕಲಸಿಟ್ಟಿದ್ದ ಮಿಶ್ರಣದಲ್ಲಿ ಅದ್ದಿ ತೆಗೆಯಿರಿ. ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಕಾಯಿಸಿ, ಅದಕ್ಕೆ ಮಿಶ್ರಣದಲ್ಲಿ ಅದ್ದಿದ ಮೊಟ್ಟೆ ಹೋಳುಗಳನ್ನು ಹಾಕಿ ಚಿನ್ನದ ಬಣ್ಣ ಬರುವಂತೆ ಕರಿದು ತೆಗೆಯಿರಿ.
ಕಾದ ಎಣ್ಣೆಗೆ ಜಜ್ಜಿದ ಶುಂಟಿ ಮತ್ತು ಕರಿಬೇವಿನ ಎಲೆ ಹಾಕಿ, ಒಳ್ಳೆಯ ಗಮಲು ಬರುವವರೆಗೆ ಕರಿಯಿರಿ. ಇದನ್ನು ಕರಿದಿಟ್ಟಿದ್ದ ಮೊಟ್ಟೆಯ ಮೇಲೆ ಉದುರಿಸಿ. ಈಗ ಮೊಟ್ಟೆ ಕಬಾಬ್ ಸವಿಯಲಿ ರೆಡಿ.
(ಸಾಂದರ್ಬಿಕ ಚಿತ್ರಸೆಲೆ: facebook.com )
ಇತ್ತೀಚಿನ ಅನಿಸಿಕೆಗಳು