ಮಾಡಿ ಸವಿಯಿರಿ ಪಕೋಡ
ಏನೇನು ಬೇಕು ?
- ತೆಳುವಾಗಿ ಉದ್ದಕ್ಕೆ ಕತ್ತರಿಸಿದ ಈರುಳ್ಳಿ – 4
- ಕಡಲೆ ಹಿಟ್ಟು – 2 ಟೀ ಸ್ಪೂನ್
- ಅಕ್ಕಿ ಹಿಟ್ಟು – 1 ಟೀ ಸ್ಪೂನ್
- ಅಡಿಗೆ ಸೋಡಾ – ಚಿಟಿಕೆಯಶ್ಟು
- ಕರಿಬೇವು – ಸ್ವಲ್ಪ
- ಅರಿಶಿನ – ಚಿಟಿಕೆಯಶ್ಟು
- ಉಪ್ಪು – ರುಚಿಗೆ ತಕ್ಕಶ್ಟು
- ಅಚ್ಚ ಕಾರದ ಪುಡಿ – 1/2 ಟೀ ಸ್ಪೂನ್
- ಎಣ್ಣೆ – ಕರಿಯಲು
ಮಾಡುವ ಬಗೆ:
ಮೊದಲಿಗೆ ಒಂದು ಪಾತ್ರೆಗೆ, ಈರುಳ್ಳಿ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅಡಿಗೆ ಸೋಡಾ, ಕರಿಬೇವು, ಉಪ್ಪು, ಅಚ್ಚ ಕಾರದ ಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ದಯವಿಟ್ಟು ಮಿಶ್ರಣ ಮಾಡುವಾಗ ನೀರನ್ನು ಬಳಸಬೇಡಿ. ಅದಕ್ಕೆ ನೀರನ್ನು ಸೇರಿಸದೆ, ಎಲ್ಲವನ್ನೂ ಮೆಲ್ಲಗೆ ಚೆನ್ನಾಗಿ ಮಿಶ್ರಣ ಮಾಡಿ. ಈರುಳ್ಳಿ ಮತ್ತು ಉಪ್ಪು ಸೇರಿಸುವುದರಿಂದಲೇ ಅವು ಚೆನ್ನಾಗಿ ಬೆರೆತುಕೊಳ್ಳಲು ಬೇಕಾದಶ್ಟು ನೀರಿನಂಶ ದೊರೆಯುತ್ತದೆ. ಹಿಟ್ಟು ಸಿದ್ದವಾದ ನಂತರ, ಎಣ್ಣೆಯನ್ನು ಕಾಯಲು ಇಡಿ. ಎಣ್ಣೆ ಸರಿಯಾಗಿ ಕಾದ ನಂತರ, ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಎಣ್ಣೆಗೆ ಹಾಕಿ. ಚಿನ್ನದ ಕಂದು ಬಣ್ಣ ಬರುವವರೆಗೆ ಕರಿಯಿರಿ. ಬಿಸಿ ಬಿಸಿ ಪಕೋಡವನ್ನು ಆನಂದಿಸಿ!
( ಚಿತ್ರಸೆಲೆ: ಬರಹಗಾರರು )


ಇತ್ತೀಚಿನ ಅನಿಸಿಕೆಗಳು