ಇಟಲಿ ಮೂಲದ ಪನ್ನಾ ಕೋಟಾ

ಏನೇನು ಬೇಕು
- ಗಟ್ಟಿ ಹಾಲು – 1/2 ಲೀಟರ್
- ಅಗರ್ ಅಗರ್ ಪುಡಿ – 2 ದೊಡ್ಡ ಚಮಚ
- ಸಕ್ಕರೆ – 1/4 ಕಪ್
- ಸ್ಟ್ರಾಬೆರಿ ಅತವಾ ರಾಸ್ಪ್ಬೆರಿ ಸಾಸ್: ಅಲಂಕಾರಕ್ಕಾಗಿ
ಮಾಡುವ ಬಗೆ
ಮೊದಲಿಗೆ, ಒಂದು ಪಾತ್ರೆಯಲ್ಲಿ ಗಟ್ಟಿ ಹಾಲನ್ನು ಕಾಯಿಸಲು ಇಡಿ. ಹಾಲು ತಳ ಹಿಡಿಯದಂತೆ ಸಕ್ಕರೆಯನ್ನು ಸೇರಿಸಿ ಸತತವಾಗಿ ಕೈಯಾಡಿಸುತ್ತಿರಿ. ಒಲೆಯ ಉರಿಯನ್ನು ಮದ್ಯಮ ಗಾತ್ರದಲ್ಲಿ ಇರಿಸಿ. ಹಾಲು ಕಾಯುವ ಸಮಯದಲ್ಲಿ, ಇನ್ನೊಂದೆಡೆ ಜಿಲೆಟಿನ್ ಮಿಶ್ರಣವನ್ನು ಸಿದ್ದಪಡಿಸಿಕೊಳ್ಳಿ. (ಸಸ್ಯಹಾರಿ ಆಯ್ಕೆಗಾಗಿ ನಾವು ಇಲ್ಲಿ ಜಿಲೆಟಿನ್ ಬದಲಿಗೆ ಅಗರ್ ಅಗರ್ ಪುಡಿಯನ್ನು ಬಳಸುತ್ತಿದ್ದೇವೆ).
ಅರ್ದ ಕಪ್ ನೀರಿಗೆ ಅಗರ್ ಅಗರ್ ಪುಡಿಯನ್ನು ಬೆರೆಸಿ, ಮದ್ಯಮ ಉರಿಯಲ್ಲಿ ಅದು ಗಟ್ಟಿ ಪೇಸ್ಟ್ ಆಗುವವರೆಗೆ ಕೈಯಾಡಿಸುತ್ತಿರಿ. ಅಗರ್ ಅಗರ್ ಪೇಸ್ಟ್ ಸಿದ್ದವಾದ ನಂತರ, ಅದನ್ನು ಕಾಯುತ್ತಿರುವ ಹಾಲಿನೊಂದಿಗೆ ಬೆರೆಸಿ. ಯಾವುದೇ ಗಂಟುಗಳು ಇಲ್ಲದಂತೆ ಸಣ್ಣ ಉರಿಯಲ್ಲಿ ಚೆನ್ನಾಗಿ ಕಲಕಿ. ಮಿಶ್ರಣ ಸಿದ್ದವಾದ ನಂತರ, ಅದನ್ನು ಒಂದು ಬೌಲ್ಗೆ ಸುರಿದು ಪ್ರಿಡ್ಜ್ನಲ್ಲಿ ಇರಿಸಿ. ಹಾಲು ಮತ್ತು ಅಗರ್ ಅಗರ್ ಮಿಶ್ರಣವು ಗಟ್ಟಿಯಾಗಲು 4 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ನಂತರ ಅದನ್ನು ನಿದಾನವಾಗಿ ಒಂದು ಪ್ಲೇಟ್ಗೆ ಹಾಕಿ, ಮೇಲೆ ಬೆರ್ರಿ ಸಾಸ್ನಿಂದ ಅಲಂಕರಿಸಿ ಸವಿಯಿರಿ.

ಇತ್ತೀಚಿನ ಅನಿಸಿಕೆಗಳು