ಅಂಟಿನ ಉಂಡೆ

– ಸವಿತಾ.

ಉತ್ತರ ಕರ‍್ನಾಟಕದ ಕಡೆ, ಬಾಣಂತಿಯರಿಗೆ ಮತ್ತು ಬೆಳೆಯುವ ಮಕ್ಕಳಿಗೆ ಶಕ್ತಿ ವರ‍್ದಕವಾಗಿ  ಅಂಟಿನುಂಡಿ(ಅಂಟಿನುಂಡೆ) ಮಾಡುವರು.

ಏನೇನು ಬೇಕು?

1/2 ಕೆ ಜಿ – ಒಣ ಕೊಬ್ಬರಿ
1/4 ಕೆ ಜಿ – ಒಣ ಕರ‍್ಜೂರ
125 ಗ್ರಾಂ – ತುಪ್ಪ
125 ಗ್ರಾಂ – ಅಂಟು
1/2 ಕೆ ಜಿ – ಬೆಲ್ಲ
50 ಗ್ರಾಂ – ಆಳವಿ
50 ಗ್ರಾಂ – ಗಸಗಸೆ
ಏಲಕ್ಕಿ ಪುಡಿ

ಮಾಡುವ ಬಗೆ:

  • ಒಣ ಕೊಬ್ಬರಿ ತುರಿದು ಇಟ್ಟುಕೊಳ್ಳಿ.
  • ಕರ‍್ಜೂರದ ಬೀಜವನ್ನು ತೆಗೆದು, ಸಣ್ಣ ಸಣ್ಣ ಚೂರುಗಳಾಗಿ ಮಾಡಿಟ್ಟುಕೊಳ್ಳಿ.
  • ಕರ‍್ಜೂರದ ಚೂರುಗಳನ್ನು ಕೊಬ್ಬರಿ ತುರಿಯೊಂದಿಗೆ ಸೇರಿಸಿ ಮಿಕ್ಸರ್ ನಲ್ಲಿ ಪುಡಿ ಮಾಡಿಕೊಂಡು, ಅದನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿಟ್ಟಿರಿ.
  • ಆಳವಿ ಹುರಿಯಿರಿ, ನಂತರ ಗಸಗಸೆಯನ್ನೂ ಬಾಣಲೆಯಲ್ಲಿ ಹುರಿದು, ಮಾಡಿಟ್ಟ ಕರ‍್ಜೂರ-ಕೊಬ್ಬರಿ ಪುಡಿಗೆ ಸೇರಿಸಿಟ್ಟಿರಿ.
  • ಸಣ್ಣ ಉರಿಯಲ್ಲಿ ತುಪ್ಪ ಕಾಯಿಸಿ. ಅದರಲ್ಲಿ ಅಂಟು ಕರಿದು, ಅದನ್ನು ಕರ‍್ಜೂರ-ಕೊಬ್ಬರಿ-ಆಳವಿ-ಗಸಗಸೆ ಪುಡಿಗೆ ಸೇರಿಸಿರಿ.
  • ಬೆಲ್ಲವನ್ನು ಪುಡಿ ಮಾಡಿ ಬಾಣಲೆಯಲ್ಲಿ ಹಾಕಿ, ಸಣ್ಣ ಉರಿಯಲ್ಲಿ ಕರಗಿಸಿ.
  • ಬೆಲ್ಲವು ಪಾಕದ ಹದಕ್ಕೆ ಬಂದಾಗ ಸ್ಟೋವ್ ಬಂದ್ ಮಾಡಿ.
  • ಪಾಕವನ್ನು ದೊಡ್ಡ ಪಾತ್ರೆಗೆ ಹಾಕಿ. ಅದಕ್ಕೆ ಅಂಟು ಸೇರಿದ ಕರ‍್ಜೂರ-ಕೊಬ್ಬರಿ-ಆಳವಿ-ಗಸಗಸೆ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ, ಚೆನ್ನಾಗಿ ದೊಡ್ಡ ಚಮಚದಿಂದ ತಿರುಗಿಸಿ
  • ಸ್ವಲ್ಪ ಆರಿದ ಮೇಲೆ ಕೈಗೆ ತುಪ್ಪ ಹಚ್ಚಿಕೊಂಡು ಉಂಡೆ ತಯಾರಿಸಿ

ಆರೋಗ್ಯಕರ ಮತ್ತು ಸ್ವಾದಿಶ್ಟ ಅಂಟಿನುಂಡೆ ಸವಿಯಲು ಈಗ ತಯಾರು 🙂

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: