ಟ್ಯಾಗ್: ತಂಗಾಳಿ

ಬಾರೆ ನೀ ಓ ತಂಗಾಳಿ

– ಸುರಬಿ ಲತಾ. ತಂಪಾಗಿ ಬೀಸುವ ಓ ಗಾಳಿ ಹೋಗೆ ಒಂದು ಮಾತು ಕೇಳೆ ನನ್ನೆದೆಯ ಒಂದು ಮಾತನು ಕೇಳದಾದ ದೂರದ ಇನಿಯನು ತೇಲಿ ಹೋಗಿ ತಲುಪಿಸು ನನ್ನ ಈ ಪ್ರೇಮ ಸಂದೇಶವನು ದೇವಾಲಯ ಕದವ ಮುಚ್ಚಿಹುದು ಕಾಣದ ದೇವನನ್ನು ನೆನೆಯಲಿ ಹೇಗಿನ್ನು ದಾರಿ ಕಾಣದೆ...

ಪ್ರೀತಿಸು ಮನವೇ ಪ್ರೀತಿಸು

– ವಿನು ರವಿ. ಪ್ರೀತಿಸು ಮನವೇ ಪ್ರೀತಿಸು ಚೆಲುವೇ ಎಲ್ಲವೂ ಪ್ರೀತಿಸು ಮನವೇ ಪ್ರೀತಿಸು ತಂಪಾಗಿ ಬೀಸುವ ಗಾಳಿಯಾ ಇಂಪಾಗಿ ಉಲಿಯುವ ಕೋಗಿಲೆಯ ಸೊಂಪಾಗಿ ಅರಳಿದಾ ಸಂಪಿಗೆಯಾ ಪ್ರೀತಿಸು ಮನವೇ ಪ್ರೀತಿಸು ಬಾಲ್ಯದ ತುಂಟ ನೆನಪುಗಳಾ ಹರೆಯದ ಹೊಸ ಆಸೆಗಳಾ ಮಾಗಿದ ಮನಸಿನ ಅನುಬವಗಳಾ ಪ್ರೀತಿಸು...

ವಂದನೆ ವಂದನೆ…

– ಸುರಬಿ ಲತಾ. ವಂದನೆ ವಂದನೆ ಆ ಬಾನಿಗೆ ವಂದನೆ ಸುಮ್ಮನೆ ನಾ ಅಪ್ಪಿದೆ ಒಪ್ಪಿದೆ ಇನಿಯನೆ ಸರಿದಿಹ ತಂಗಾಳಿಗೆ ನಲಿದಿಹೆ ತೋಳಿನಲಿ ಗೆಳೆಯನ ಸಂಗದಲಿ ತಂಗಾಳಿಗೆ ವಂದನೆ ಪ್ರೇಮಿಗಳ ಮನದಾಸೆಗಳ ಅರಿತಿಹ ಕರುಣನಿಗೆ ಮಳೆಗರೆದಿಹ ವರುಣನಿಗೆ ವಂದನೆ ಅಬಿವಂದನೆ ನಡುಗಿದೆ ಮೈ ಸಣ್ಣಗೆ ಒಡಲಾಯಿತು...

ಮಂದಹಾಸವ ನೀನು ನೋಡಬಾರದೆ ಇಂದು?

– ಈಶ್ವರ ಹಡಪದ. ನಿನ್ನ ಸಹವಾಸದಿಂದ ಕನಸುಗಳ ರಾಶಿ ಈಗ ವಿಸ್ತಾರವಾಗುತ್ತಿದೆ ನೋಡು ತಂಗಾಳಿಯು ಕೂಡ ನಿನ್ನ ನೆನಪಿಸುತ್ತಿರಲು, ನಿನ್ನ ಉಸಿರಿಗೆ ತಾಕಿ ನನ್ನ ಮನಸ್ಸು ಕರಗಲು ಬಯಸುತ್ತಿದೆ ಇಂದು ನನ್ನ ನೆನಪಿನ ಸಂತೆಗೆ ನಿನ್ನದೇ ಹೆಸರಿರುವಾಗ ಹ್ರುದಯವು ನಿನ್ನ ಮರೆತಂತೆ ನಟಿಸಲು ಸಾದ್ಯವೇ ಇಂದು?...

ಸಂಜೆಯೊಂದಿಗೆ ಮನ ಮಂಜಾಗಲು

– ಸಂದೀಪ ಔದಿ. ಮಳೆಗಾಲ ಮಲೆನಾಡಿನಲ್ಲಿ ಕೊಡೆಹಿಡಿದು ಇಳಿಜಾರಿನಲ್ಲಿ ಮೆಲ್ಲನೆ ನೀ ನಡೆಯುವಾಗ ಇಬ್ಬನಿ ರಾಶಿಯ ಹಸಿರ ಹಾಸಿನಮೇಲೆ ಉಶೆಯ ಆರಂಬದ ಗಳಿಗೆಯಲ್ಲಿ ಮೆಲ್ಲನೆ ನೀ ಮೈ ಮುರಿಯುವಾಗ ಹುಣ್ಣಿಮೆ ರಾತ್ರಿಯಲ್ಲಿ ಚಂದ್ರ ತಾರೆಯರ ಹೊನಲ ಬೆಳಕಲ್ಲಿ ನಲ್ಲನ ನೀ ನೆನೆಯುವಾಗ ಕವಿಯಾಗದಿರಲು ನಾನು ಲೇಕನಿ-ಶಾಹಿ-ಬಿಳಿಹಾಳೆಗೆ...

ಹಳ್ಳಿಯಲ್ಲೊಂದು ಬೆಳಗು

– ವಿನು ರವಿ. ನಬದಲ್ಲಿ ಸೂರ‍್ಯಕಾಂತಿ ಹೂವರಳಿದಂತೆ ನೇಸರನ ಚೆಲುವಿನಾ ರಂಗು ನೀಲಬಿಂಬ ಹೊತ್ತ ಪುಟ್ಟ ಕೆರೆಯಲ್ಲಿ ತಳತಳಿಸುತ್ತಿದೆ ಬೆಳಗು ಹಸುರು ಅವರೆ ರಾಗಿ ತೆನೆಗಳು ತಂಗಾಳಿಗೆ ಕಂಪು ತುಂಬಿ ತೊನೆದಾಡಿವೆ ಹಕ್ಕಿಗಳ ಚಿಲಿಪಿಲಿ ಹಳ್ಳಿಯ ಬದುಕು ಆರಂಬ ಹಿತ್ತಲಲ್ಲಿ ಮಲ್ಲಿಗೆ, ಸಂಪಿಗೆ, ಕಣಗಿಲೆ ಹೂಗಳ...