ಹೊನಲು

– ಬರತ್ ಕುಮಾರ್.

sildanಕಾಲುವೆಯೊಳಗೆ
ಇರುವ ಚೆಲುವೆ
ಒಲವೆ
ಜುಳು ಜುಳು ನೀರೇ
ಬಳುಕುವ ನೀರೆ
ಹೊಳೆಯುವ ತೊರೆ
ತೊಳೆಯುವೆ ಮಯ್ಯ ಆದರೆ
ಉಳಿದಿಹುದು ಬಗೆಯಲ್ಲಿ ಕರೆ
ಬಾರೆ ಬಾರೆ
ಬಗೆಯ ಕರೆ ತೊಳೆಯ ಬಾರೆ
ಕತ್ತಲ ಕೊಳೆಯ ಬಿಡಿಸ ಬಾರೆ
ಹೊಸನೀರಿನ ಹೊನಲಾಗಿ ನೀ ಬಾರೆ
ಹೊನಲಾಗಿ ನೀ ಬಾರೆ
ಹೊನಲಾಗಿ ನೀ ಬಾರೆ

(ಚಿತ್ರ: http://www.scenicreflections.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: