ತುಸುವಾದರು ಮರೆ ಬದುಕಿನ ತುಡಿತ

twilight

ಹಗಲಿಳಿದು ಗೋದೂಳಿ ಹೊತ್ತಾಗಿರಲು
ಉರಿದುರಿದ ರವಿ ತುಸು ತ೦ಪಾಗಿರಲು
ಬಾನಲ್ಲಿ ಹೊನ್ನಿನ ಹೊಳೆ ಮೂಡಿ
ಅಡಗಿದ್ದ ತ೦ಗಾಳಿ ಗಿಡದೆಲೆಗಳ ದೂಡಿ
ಹರಡಿದ್ದ ಕರಿಮೋಡಗಳು ಸರಸರನೆ ಒಂದಾಗಿ
ಪಟಪಟನೆ ಸುರಿಸಿದವು ಪ್ರೀತಿಯ ಮುತ್ತುಗಳ

ಒಲವಿನ ಪನ್ನೀರಿನಲಿ ದರಣಿ ಮಿಂದಿರಲು
ಸುಳಿದ ಗಾಳಿ ಅವಳ ಮಯ್ ಸೋಕಿ ಕಂಪನ್ನು ಪಸರಿಸಿರಲು
ಬಳಲಿದ ಜೀವಗಳಲ್ಲಿ ನೆಮ್ಮದಿಯ ಉಸಿರು ತುಂಬಿ
ಮರಳಿತು ಉಲ್ಲಾಸದ ಕಳೆ ನೆರೆಹೊರೆಯಲ್ಲಿ

ಹಕ್ಕಿಗಳ ಚಿಲಿಪಿಲಿಯ ಹೊಸ ರಾಗಕ್ಕೆ
ಗಾಳಿಯ ಜೊತೆಯಲ್ಲಿ ಮರಗಿಡಗಳ ಕುಣಿತ
ಆಹಾ! ಪ್ರಕ್ರುತಿ ಅಬ್ಬೆಯ ಈ ಒಸಗೆಯಲ್ಲಿ
ಮನವೇ, ತುಸುವಾದರು ಮರೆ ಬದುಕಿನ ತುಡಿತ.

 ಬಸವರಾಜ್ ಕಂಟಿ

(ಚಿತ್ರ: www.dpreview.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ತುಂಬಾ ಚೆನ್ನಾಗಿದೆ

ಅನಿಸಿಕೆ ಬರೆಯಿರಿ:

%d bloggers like this: