ನಾ ವಸಿ ತಿಕ್ಲ

– ಬರತ್ ಕುಮಾರ್.

madlove

ಹೊತ್ತಾರೆ ನಾ ಎದ್ದು
ಮತ್ತಾರು ಕಾಣ್ದಂಗೆ
ಚಿತ್ತಾರದ ರಂಗೋಲಿ ನಾ ಹಾಕ್ಲ?
ಏನ್ಮಾಡ್ಲಿ ಹೇಳು
ನಾ ವಸಿ ತಿಕ್ಲ |ಪ|

ಮಕ್ಕಳನು ಮೀಯಿಸಿ
ನಿಕ್ಕರನು ಸಿಗಿಸಿ
ಅಕ್ಕರೆಯ ಮಾತಾಡಿ
ಸಕ್ಕರೆಯ ತಿಂಡಿ ತಿನ್ನಿಸ್ಲ ?
ಏನ್ಮಾಡ್ಲಿ ಹೇಳು
ನಾ ವಸಿ ತಿಕ್ಲ |1|

ಬಯ್ಗಿಗೆ ಬೋಂಡವ
ಇರುಳಿಗೆ ಎಣ್ಗಾಯ ಮಾಡಿ
ನನ್ನ ಕಯ್ರುಚಿ ವಸಿ ತೋರಿಸ್ಲ
ಏನ್ಮಾಡ್ಲಿ ಹೇಳು
ನಾ ವಸಿ ತಿಕ್ಲ |2|

ಪಾಚಿಕೊಂಡಾಗ ತೋಚಿದ ಹಾಡು
ಎಚ್ಚೆತ್ತಾಗ ಹೊಂಗನಸ ಹಾಡು
ನಾ ನಿನಗೆ ಹಾಡಿ ತೋರಿಸ್ಲ
ಕಣ್ಣಲ್ಲಿ ಕಣ್ಣಿಟ್ಟು ನಾ ನೋಡ್ಕೊಳ್ಲ
ಏನ್ಮಾಡ್ಲಿ ಹೇಳು
ನಾ ವಸಿ ತಿಕ್ಲ |3|

(ಚಿತ್ರ: http://my.opera.com)

3 ಅನಿಸಿಕೆಗಳು

  1. ಏನ್ಸಾರ್ ಯಾರಿಗೋಸ್ಕರ ಬರೆದಿದ್ದು ಈ ಹಾಡು? ಈ ತರ ಹಾಡಿದ್ರೆ ಎಲ್ರೂ ನಿಮ್ ಹಿಂದೆ ಬೀಳ್ತಾರಶ್ಟೆ. ಆಮೇಲೆ ನೀವು ಎಲ್ರಿಂದ ಓಡಿ ಹೋಗ್ಬೇಕಾಗುತ್ತಶ್ಟೆ! 😉

  2. ಸತೀಶ್,
    ನಿಮ್ಮ ಹೊಗಳುನುಡಿಗಳಿಗೆ ತಲೆಬಾಗುವೆ,

    ಶಶಿ,
    ಇದು ‘ಡ್ರಾಮ’ ಸಿನಿಮಾದ ಹಾಡಿನ ಟ್ಯೂನಿಗೆ ಬರೆದದ್ದು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.