ಎಲ್ಲಿಹನು ಆ ದೇವನು?

prahallada1

ಮರುಬೂಮಿಯನ್ನು ಬಗೆದು
ತನ್ನ ಬೇರುಗಳಲ್ಲಿ ಬಿಗಿದು
ಬೂಮಿ-ಗಗನವ ಏಕಮಾಡಿ
ಕೊಂಬೆಯಾಗಿ ಕಯ್ಯಚಾಚಿ
ಹಸಿರ ಹರಡಿ ಉಸಿರ ನೀಡುವ
ಮರದ ಬೆನ್ನಿಗೆ ಚೂರಿ ಇರಿದಾಗ…
ಎಲ್ಲಿಹನು ಆ ದೇವನು? ದೇಹ ಕಾಯ್ವ ಒಡೆಯನು ?? |1|

ಅಸ್ತಿ ಪಂಜರದೊಳಗೆ
ಹಸಿ ಜೀವವನಿಟ್ಟು
ಹಸುಗೂಸಿನ ಹಸಿವೆಗೆ
​​ಹೊಲಸೆಯನೇ ಹೊಸಿದು
ಕವಲೊಡೆದ ದಾರಿಯಲಿ
ಅವ ಅಂಗಯ್ಗಳನಗಲಿ ನಿಂತಾಗ…
ಎಲ್ಲಿಹನು ಆ ದೇವನು? ದೇಹ ಕಾಯ್ವ ಒಡೆಯನು ?? |2|

ಕಣ್ಣಿನಲ್ಲಿ ಕನಸನಿಟ್ಟು
ಕಣ್ಣಿನಂಚಲಿ ಕಸವನಿಟ್ಟು
ನೋಟ ಕೊಟ್ಟು ದ್ರುಶ್ಟಿ ಕಸಿದು
ಕಪ್ಪು ಕಲ್ಲಿಗೆ ಕಯ್ಯ ಮುಗಿಸಿ
ನಿತ್ಯ ಬೇಡುವ ರೋಗ ಬೆಳಸಿ
ಮರು ತಪ್ಪುಗಳಿಗೆ ನಾಂದಿ ಹಾಡುವ…
ಎಲ್ಲಿಹನು ಆ “ನಿನ್ನ” ದೇವನು? “ನಮ್ಮ” ದೇಹ ಕಾಯ್ವ ಒಡೆಯನು ?? |3|

ಶ್ರೀವತ್ಸ ಪ್ರಹಲ್ಲಾದ

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ತುಂಬಾ ಚೆನ್ನಾಗಿದೆ ಶ್ರೀವತ್ಸ …. ಛಡಿ ಏಟು ತರಹ ಇರುವ ಈ ಪ್ರಶ್ನೆಗಳು ನಮ್ಮನ್ನು ಯಾವಾಗಲೂ ಕಾಡುತ್ತವೆ. ಆದರೆ ಕಡಗೆ ಉತ್ತರ ಸಿಗದ್ದಿದ್ದಾಗ, “ray of hope” ಹುಡುಕಿಕೊಂಡು ಸಾಗುವುದೇ ಮನುಷ್ಯ ಜೇವನ. ಅದು ನನ್ನ ಅನಿಸಿಕೆ.

ಅನಿಸಿಕೆ ಬರೆಯಿರಿ: